ಮೈಸೂರು

ಕಾಂಕ್ರೀಟ್ ಚರಂಡಿ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ

ಮೈಸೂರು,ಡಿ.1:- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೆಸರೆ 2ನೇ ಹಂತ ಬಡಾವಣೆಯ 2ನೇ ಕ್ರಾಸ್ ರಸ್ತೆ ಬದಿಯಲ್ಲಿ ‘ಎಲ್’ ಆಕಾರದ ಕಾಂಕ್ರೀಟ್ ಚರಂಡಿ ಮತ್ತು ರಸ್ತೆ ಅಭಿವೃದ್ಧಿ (ಟೆಂಡರ್ ಮೊತ್ತ ರೂ.10,76,000) ಮತ್ತು ಕೆಸರೆ 2ನೇ ಹಂತ ಬಡಾವಣೆಯ 7ನೇ ಕ್ರಾಸ್ ರಸ್ತೆ ಬದಿಯಲ್ಲಿ ‘ಎಲ್’ ಆಕಾರದ ಕಾಂಕ್ರೀಟ್ ಚರಂಡಿ ಮತ್ತು ರಸ್ತೆ ಅಭಿವೃದ್ಧಿ (ಟೆಂಡರ್ ಮೊತ್ತ ರೂ.11,01,000) ಕೈಗೆತ್ತಿಕೊಳ್ಳಲಾಗಿದ್ದು, ಸದರಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ಪ್ರಾಧಿಕಾರದ ಅಧ್ಯಕ್ಷ.ಡಿ.ಧ್ರುವಕುಮಾರ್ ನೆರವೇರಿಸಿದರು.

ಈ ಸಂದರ್ಭ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರ.ಜಿ.ಮೋಹನ್ ರವರು, ಸಹಾಯಕ ಅಭಿಯಂತರರುಗಳು ಹಾಗೂ ನಗರ ಪಾಲಿಕೆ ಸದಸ್ಯರಾದ  ಹಸೀನಾ ತಾಜ್ , ಮುಡಾ ಮಾಜಿ ಸದಸ್ಯ ಅನ್ನುಬಾಯಿ ಮತ್ತು ಸ್ಥಳೀಯ ಮುಖಂಡರಾದ ಅಜ್ಜು ಬ್ರದರ್ಸ್ ಹಾಗೂ ಬಡಾವಣೆಯ ನಿವಾಸಿಗಳು ಹಾಜರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: