ಕರ್ನಾಟಕ

ಹೆರಾಯಿನ್ ಮಾರಾಟ ಮಾಡುತ್ತಿದ್ದ ಮೂವರ ಬಂಧನ

ರಾಜ್ಯ(ಬೆಂಗಳೂರು)ಡಿ.1:- ಮಾದಕವಸ್ತು ಹೆರಾಯಿನ್ ಮಾರಾಟ ಮಾಡುತ್ತಿದ್ದ ಮಣಿಪುರ ಮೂಲದ ಮೂವರು ಆರೋಪಿಗಳನ್ನು ಪುಲಕೇಶಿನಗರ ಪೊಲೀಸರು ಬಂಧಿಸಿ 5, 20,000ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಕಮ್ಮನಹಳ್ಳಿಯ ಮೊಹಮ್ಮದ್ ಏಜಾಜ್(24)ಶಿವಾಜಿನಗರದ ಮೊಹಮ್ಮದ್ ಸೈಯದ್ ಜಿಯಾ ವುಲ್ ಹಕ್ (28) ಮೊಹಮ್ಮದ್ ಹಬೀಬುರ್ ರೆಹಮಾನ್(43) ಎಂದು ಗುರುತಿಸಲಾಗಿದೆ. ಬಂಧಿತರಿಂದ 103 ಗ್ರಾಂ ಹೆರಾಯಿನ್ 5 ಸಾವಿರ ನಗದು ಹೊಂಡಾ ಡಿಯೋ ಸ್ಕೂಟರ್ ಸೇರಿ 5,20,000ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸುನೀಲ್‌ಕುಮಾರ್ ತಿಳಿಸಿದರು. ಆರೋಪಿಗಳು  ಮಣಿಪುರದ ಅಮೀರ್ ಎಂಬಾತನಿಂದ ಹೆರಾಯಿನ್ ಖರೀದಿಸಿಕೊಂಡು ನಗರಕ್ಕೆ ಬಂದು ಚಿಕ್ಕ ಪ್ಯಾಕ್‌ಗಳಾಗಿ ಕಟ್ಟಿ ನಗರದ ವಿವಿದೆಢೆ ಸಂಚರಿಸಿ ಹೆಚ್ಚಿ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದರು. ಖಚಿತ ಮಾಹಿತಿ ಮೇಲೆ ಆರೋಪಿಗಳನ್ನು  ಪುಲಕೇಶಿನಗರ ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: