ಮೈಸೂರು

ಇ-ಟಾಯ್ಲೆಟ್ ಗೆ ಚಾಲನೆ

ಮೈಸೂರಿನ ದೇವರಾಜ ಅರಸು ರಸ್ತೆಯ ಪೂರ್ವದ ದಿವಾನ್ ರಸ್ತೆಯ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಇ-ಟಾಯ್ಲೆಟ್ ಗೆ ಭಾನುವಾರ ಚಾಲನೆ ನೀಡಲಾಯಿತು.

ಇ-ಟಾಯ್ಲೆಟ್ ಗೆ ಮಹಾನಗರಪಾಲಿಕೆ ಮೇಯರ್ ಬಿ.ಎಲ್.ಭೈರಪ್ಪ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಇದು ಮೈಸೂರಿನಲ್ಲಿಯೇ ಮೊದಲ ಇ-ಟಾಯ್ಲೆಟ್ ಆಗಿದೆ. ದೇವರಾಜ ಅರಸು ರಸ್ತೆ ಯಾವಾಗಲೂ ಜನದಟ್ಟಣೆಯಿಂದ ಕೂಡಿರುತ್ತದೆ. ಇಲ್ಲಿ 90 ಪ್ರತಿಶತ ಅಂಗಡಿಗಳಿಗೆ ಟಾಯ್ಲೆಟ್ ವ್ಯವಸ್ಥೆ ಇಲ್ಲ. ಇ-ಟಾಯ್ಲೆಟ್ ನಿಂದ ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ. ಅದರಲ್ಲೂ ವೃದ್ಧರಿಗೆ ತುಂಬಾನೇ ಅನುಕೂಲವಾಗಲಿದ್ದು, ಉಪಯೋಗ ಸ್ನೇಹಿಯಾಗಿದೆ ಎಂದರು.

ಪಾಲಿಕೆಯ ಆಯುಕ್ತ ಜೆ.ಜಗದೀಶ್ ಮಾತನಾಡಿ ರಸ್ತೆ ಅಗಲೀಕರಣವೇಳೆ ಹಾಗೂ ಅಭಿವೃದ್ಧಿಯ ವೇಳೆ ಇದನ್ನು ಸುಲಭವಾಗಿ ಸ್ಥಳಾಂತರಿಸಬಹುದು. ಇದರಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದರಲ್ಲಿ ಅಧಿಕ ನೀರನ್ನು ಉಳಿಸಬಹುದು ಎಂದರು.

ಇ-ಟಾಯ್ಲೆಟ್ 5.80ಲಕ್ಷರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.

ಕಾರ್ಯಕ್ರಮದಲ್ಲಿ ಶಾಸಕ ವಾಸು, ಪಾಲಿಕೆ ಸದಸ್ಯ ಪ್ರಶಾಂತ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: