ಸುದ್ದಿ ಸಂಕ್ಷಿಪ್ತ

ಕೋಟೆ ಆಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ಡಿ.15ರವರೆಗೆ ವಿಶೇಷ ಪೂಜೆ -ಸಾಂಸ್ಕೃತಿಕೋತ್ಸವ

ಮೈಸೂರು,ಡಿ.1 : ನಗರದ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಡಿ.15ರವರೆಗೆ ಹನುಮ ಜಯಂತಿ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದೆ.

ಡಿ.9ರಂದು ಸಂಜೆ 7 ಗಂಟೆಗೆ ಶ್ರೀಸೀತಾರಾಮರ ಕಲ್ಯಾಣ ಮಹೋತ್ವವವ ನಡೆಯುವುದು. ಡಿ.12ರಂದು ಬೆಳಗ್ಗೆ 8 ಗಂಟೆಗೆ ಶ್ರೀರಾಮದೇವರ ಪಟ್ಟಾಭಿಷೇಕ ಮಹೋತ್ಸವ, ಡಿ.13ರ ಸಂಜೆ 4.30ಕ್ಕೆ ರಾಜಬೀದಿಗಳಲ್ಲಿ ಸೀತಾರಾಮ ಲಕ್ಷ್ಮಣ ಹನುಮಂತ ದೇವರ ಉತ್ಸವ ನಡೆಯುವುದು.  ಡಿ.14ರಂದು ಸಂಜೆ 7 ಗಂಟೆಗೆ ಸೀತಾರಾಮ ಲಕ್ಷ್ಮಣ, ಹನುಮಂತ ದೇವರ ಉಯ್ಯಾಲೋತ್ಸವ ನಡೆಯುವುದು. ಡಿ.15ರಂದು ಸೀತಾರಾಮ ಲಕ್ಷ್ಮಣ ಹನುಮಂತ ದೇವರಿಗೆ ತೀರ್ಥಸ್ನಾನ ಅವಭೃತಸ್ನಾನವನ್ನು ನಡೆಸಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: