ಮೈಸೂರು

ಜಲಪಾತೋತ್ಸವದಲ್ಲಿ ಹರಿಯಲಿದೆ ಗಾಯನ ಸುಧೆ

ನೀರಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಹಿಳೆಯರು, ಪುರುಷರು, ವೃದ್ಧರು, ಮಕ್ಕಳು ಎಲ್ಲರಿಗೂ ನೀರಂದ್ರೆ ತುಂಬಾನೇ ಪ್ರಾಣ. ಅಷ್ಟೇ ಏಕೆ ನಮ್ಮ ಶರೀರದ ಶೇ.70ರಷ್ಟು ಭಾಗ ಕೂಡಾ ನೀರಿನಿಂದಲೇ ಆವರಿಸಿದೆ.

ಅಷ್ಟಕ್ಕೂ ಈ ನೀರಿನ ವರ್ಣನೆ ಯಾಕೆ ಅಂತ ಕೇಳ್ತಿದ್ದೀರಾ..? ಅಲ್ಲೇ ಇರೋದು ವಿಶೇಷತೆ. ನೀರಂದ್ರೆನೆ ಎಲ್ರಿಗೂ ಪ್ರಾಣವಾಗಿರೋವಾಗ ಮೇಲಿನಿಂದ ಧಾರೆ ಧಾರೆಯಾಗಿ ಧುಮ್ಮಿಕ್ಕೊ ಜಲಪಾತ ನೋಡೋಕಂತೂ ಎರಡು ಕಣ್ಣುಗಳು ಸಾಲದು.

Chunchankatte jalapaatotsava (2)

ಒಂದು ಕಡೆ ನೀರಿನ ಭೋರ್ಗರೆತ, ಇನ್ನೊಂದೆಡೆ ಗಾಯನ ಸುಧೆ ಹರಿಯುತ್ತಿದ್ದರೆ ನಿಜಕ್ಕೂ ವರ್ಣಿಸಲಸದಳ. ಇಂತಹ ಒಂದು ಪ್ರಯತ್ನಕ್ಕೆ ಮೈಸೂರು ಜಿಲ್ಲಾಡಳಿತ ಕೈ ಹಾಕಿದೆ.

ಮೈಸೂರಿನಿಂದ ಸುಮಾರು 60 ಕಿ.ಮೀ ದೂರವಿರುವ ಕೆ.ಆರ್. ನಗರದ ಚುಂಚನಕಟ್ಟೆಯಲ್ಲಿ ಆಗಸ್ಟ್ 27-28ರಂದು ಜಲಪಾತೋತ್ಸವ ನಡೆಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮೂಲಸೌಲಭ್ಯ ಒದಗಿಸುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದು, ರಸ್ತೆಗಳನ್ನು ಡಾಂಬರೀಕರಣಗೊಳಿಸುತ್ತಿದೆ.

ಆ.27ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಉದ್ಘಾಟನೆಗೊಳ್ಳಲಿರುವ ಜಲಪಾತೋತ್ಸವಕ್ಕೆ ರಾಕಿಂಗ್ ಸ್ಟಾರ್ ಯಶ್ ಚಾಲನೆ ನೀಡಲಿದ್ದಾರೆ. ಆಗಸ್ಟ್ 28 ರಂದು ಗಾಯಕ ವಿಜಯಪ್ರಕಾಶ್ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಒಟ್ಟಿನಲ್ಲಿ ವಿಶ್ವ ವಿಖ್ಯಾತ ದಸರಾ ಉತ್ಸವದ ಮೆರುಗನ್ನು ತಾಲೂಕು ಮಟ್ಟದಿಂದಲೇ ಹೆಚ್ಚಿಸಬೇಕೆನ್ನುವ ಇರಾದೆಯನ್ನು ಜಿಲ್ಲಾಡಳಿತ ಹೊಂದಿದಂತಿದೆ.

Leave a Reply

comments

Tags

Related Articles

error: