ದೇಶಪ್ರಮುಖ ಸುದ್ದಿಮೈಸೂರು

ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಭೇಟಿ

ಮೈಸೂರು,ಡಿ.1:- ವಿಶೇಷ ವಿಮಾನದ ಮೂಲಕ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಮೈಸೂರಿಗೆ ಆಗಮಿಸಿದರು.

ನಗರಕ್ಕೆ ಆಗಮಿಸಿದ ಎಲ್.ಕೆ.ಆಡ್ವಾಣಿ ಅವರನ್ನು  ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ , ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಮಂಜುನಾಥ್ ಮತ್ತಿತರ ಬಿಜೆಪಿ ಪ್ರಮುಖರು ಹೂಗುಚ್ಛ ನೀಡಿ, ಶಾಲು ಹೊದೆಸಿ, ಹಾರ ಹಾಕಿ ಆತ್ಮೀಯವಾಗಿ ಸ್ವಾಗತಿಸಿದರು.

ಬಳಿಕ ಶ್ರೀಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ತೆರಳಿದ ಆಡ್ವಾಣಿ ಅವರು ಹನುಮ 3ಡಿ ಪ್ರೊಜೆಕ್ಷನ್ ಟೆಕ್ನಾಲಜಿ ವಿಶೇಷ ಪ್ರದರ್ಶನಕ್ಕೆ ಚಾಲನೆ ನೀಡಿದರು. ಇಂದು ಹನುಮ ಜಯಂತಿ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  ಆಶ್ರಮದಲ್ಲಿನ 45 ಅಡಿ ಎತ್ತರದ ಕಾರ್ಯಸಿದ್ಧಿ ಆಂಜನೇಯ ವಿಗ್ರಹಕ್ಕೆ ಅನುಗುಣವಾಗಿ ತುಲಸೀದಾಸ್ ರಚಿತ ಹನುಮಾನ್ ಚಾಲೀಸಾ ಶ್ಲೋಕ ಆಧರಿಸಿ ಸುಮಾರು 8ನಿಮಿಷಗಳ ಕಾಲ ಪ್ರೊಜೆಕ್ಷನ್ ಮ್ಯಾಪಿಂಗ್  ಟೆಕ್ನಾಲಜಿ ಮೂಲಕ ವಿಶೇಷ ಪ್ರದರ್ಶನ ನೀಡಲಾಯಿತು. ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ತುಂತುರು ಮಳೆ ಸುರಿಯುತ್ತಿದ್ದು, ಮಳೆಯಲ್ಲಿಯೇ ಛತ್ರಿ ಅಡಿಯಲ್ಲಿ ಕುಳಿತು ಎಲ್ಲವನ್ನೂ ವೀಕ್ಷಿಸಿದರು. ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಆಡ್ವಾಣಿ ಅವರಿಗೆ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭ ಅನೇಕ ಗಣ್ಯರು ಉಪಸ್ಥಿತರಿದ್ದರು. (ಎಸ್.ಎಚ್)

 

Leave a Reply

comments

Related Articles

error: