ಕರ್ನಾಟಕಪ್ರಮುಖ ಸುದ್ದಿಸಿಟಿ ವಿಶೇಷ

ಮಂತ್ರಾಲಯ ಕ್ಷೇತ್ರ: ಕರ್ನಾಟಕ ಯಾರ್ತಾರ್ಥಿಗಳು ಸಂಪರ್ಕಿಸಬೇಕಾದ ವಿಳಾಸ

ಬೆಂಗಳೂರು (ಡಿ.2): ನೆರೆ ರಾಜ್ಯವಾದ ಆಂಧ್ರಪ್ರದೇಶದ ಪವಿತ್ರ ಮಂತ್ರಾಲಯ ಯಾತ್ರಾ ಸ್ಥಳದಲ್ಲಿ ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಬರುವ ಕರ್ನಾಟಕ ರಾಜ್ಯ ಛತ್ರ (ವಸತಿ ಗೃಹ) ವಿರುತ್ತದೆ. ಶ್ರೀಕ್ಷೇತ್ರಕ್ಕೆ ತೆರಳುವ ಭಕ್ತರು, ಯಾತ್ರಾರ್ಥಿಗಳಿಗೆ ತಂಗಲು ಇಲ್ಲಿ ಸೌಲಭ್ಯವನ್ನು ಕಲ್ಪಿಸಲಾಗುವುದು. ಯಾತ್ರಾರ್ಥಿಗಳು ನೆರೆ ರಾಜ್ಯದಲ್ಲಿರುವ ಕರ್ನಾಟಕ ರಾಜ್ಯ ಛತ್ರದಲ್ಲಿನ ಪತ್ರಾಂಕಿತ ವ್ಯವಸ್ಥಾಪಕರ ಕಾರ್ಯಾಲಯ, ಕರ್ನಾಟಕ ರಾಜ್ಯ ಛತ್ರ, ಮಂತ್ರಾಲಯ, ಆಂಧ್ರಪ್ರದೇಶ – ಇಲ್ಲಿ ಸಂಪರ್ಕಿಸಿ ವಸತಿ ಗೃಹವನ್ನು ಪಡೆಯಹುದಾಗಿದೆ. ಛತ್ರದ ದೂರವಾಣಿ ಸಂಖ್ಯೆ 08512279600, 9481989423.

(ಎನ್‍ಬಿಎನ್‍)

Leave a Reply

comments

Related Articles

error: