
ಕರ್ನಾಟಕ
ಮಳೆಯಿಂದಾಗಿ ಧರೆಗುರುಳಿದ ಮರ, ವಿದ್ಯುತ್ ಕಂಬಗಳು
ಸೋಮವಾರಪೇಟೆ,ಡಿ.2-ಹವಾಮಾನ ವೈಪರಿತ್ಯದಿಂದಾಗಿ ಕಳೆದೆರಡು ಮೂರು ದಿನಗಳಿಂದ ಪಟ್ಟಣದ ಸುತ್ತಮುತ್ತ ಗಾಳಿ ಸಹಿತ ಮಳೆಯಾಗುತ್ತಿದೆ. ಮಳೆಯಿಂದಾಗಿ ಅಲಲ್ಲಿ ಮರಗಳು ಧರೆಗುರುಳಿದೆ.
ಕೆಲವೆಡೆ ಮರಗಳು ಧರೆಗುರುಳಿದರೆ ಮತ್ತೆ ಕೆಲವೆಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದರಿಂದ ಕೆಲ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸೋಮವಾರಪೇಟೆಯಿಂದ ಕೆಂಚಮ್ಮನ ಬಾಣೆಗೆ ತೆರಳುವ ಮಾರ್ಗದಲ್ಲಿ 33 ಕೆವಿ ವಿದ್ಯುತ್ ಮಾರ್ಗದ ಮೇಲೆ ಸಿಲ್ವರ್ ಮರವೊಂದು ಬಿದ್ದ ಪರಿಣಾಮ ಸೋಮವಾರಪೇಟೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಬೇಳೂರಿಗೆ ತೆರಳುವ ಮಾರ್ಗದ ಗ್ಯಾಸ್ ಗೋದಾಮು ಬಳಿ, ಕಿಬ್ಬೆಟ್ಟ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ, ಅಬ್ಬೂರುಕಟ್ಟೆಯ ಬಳಿ ಮರಗಳು ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಜಖಂಗೊಂಡಿದ್ದವು. ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದ ಮರಗಳನ್ನು ಶುಕ್ರವಾರ ತೆರವುಗೊಳಿಸಿದ ಸೆಸ್ಕ್ ಸಿಬ್ಬಂದಿಗಳು ವಿದ್ಯುತ್ ಸಂಪರ್ಕ ಲಭ್ಯವಾಗುವಂತೆ ಮಾಡಿದ್ದಾರೆ. (ವರದಿ-ಕೆಸಿಐ, ಎಂ.ಎನ್)