ದೇಶಪ್ರಮುಖ ಸುದ್ದಿ

ಹೋರಾಟಕ್ಕೆ ಮಣಿದ ಆಂಧ್ರ ಸರ್ಕಾರ: ವಿಧಾನಸಭೆಯಲ್ಲಿ ಕಾಪು ಮೀಸಲಾತಿ ಮಸೂದೆ ಅಂಗೀಕಾರ

ಅಮರಾವತಿ (ಡಿ.2): ಮೀಸಲಾತಿ ನೀಡಬೇಕೆನ್ನುವ ಕಾಪು ಸಮುದಾಯದ ಹೋರಾಟಕ್ಕೆ ಮಣಿದ ಆಂಧ್ರ ಪ್ರದೇಶದ ತೆಲುಗು ದೇಶಂ ಪಕ್ಷದ ಸರ್ಕಾರವು ವಿಧಾನಸಭೆಯಲ್ಲಿ ಕಾಪು ಮೀಸಲಾತಿ ಮಸೂದೆಗೆ ಅವಿರೋಧ ಅಂಗೀಕಾರ ನೀಡಿದೆ.

ಈ ಮಸೂದೆ ಅಂಗೀಕಾರವಾದ ಕಾಣರ ಕಾಪು ಸಮುದಾಯಕ್ಕೆ ಶೇ.5ರಷ್ಟು ಮೀಸಲಾತಿ ದೊರೆಯಲಿದೆ. ಇದರೊಂದಿಗೆ ಆಂಧ್ರಪ್ರದೇಶ ರಾಜ್ಯದಲ್ಲಿ ಒಟ್ಟಾರೆ ಮೀಸಲಾತಿ ಗಾತ್ರ ಶೇ.50ಕ್ಕೆ ಹೆಚ್ಚಾಗಿದೆ.

ಮೀಸಲಾತಿ ಮಸೂದೆಯು ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಆಂಗೀಕಾರವಾಗಿದೆಯಷ್ಟೇ. ಆದರೆ ಕೇಂದ್ರದ ಅಂಗೀಕಾರ ಅಗತ್ಯವಿದ್ದು, ಶೀಘ್ರದಲ್ಲೇ ಮಸೂದೆಯನ್ನು ಕೇಂದ್ರಕ್ಕೆ ರವಾನಿಸಲಾಗುವುದು ಎಂದು ಆಂಧ್ರಪ್ರದೇಶ ಸರ್ಕಾರವು ಕೇಂದ್ರಕ್ಕೆ ರವಾನಿಸಲಿದೆ.

ಕಾಪು ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವಂತೆ ಕಳೆದ ಜನವರಿ ತಿಂಗಳಲ್ಲಿ ಕಾಪು ನಾಯಕ ಮುದ್ರಗಡ ಪದ್ಮನಾಭಂ ನೇತೃತ್ವದಲ್ಲಿ ಭಾರಿ “ಕಾಪು ಘರ್ಜನೆ” ಹೆಸರಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ತುನಿ ರೈಲು ನಿಲ್ದಾಣದಲ್ಲಿ ಇಡೀ ರೈಲಿಗೆ ಆಕ್ರೋಶಿತ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದರು. ಈ ಘಟನೆ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

ಆಂಧ್ರ ಪ್ರದೇಶ ಮುಖ್ಯಮಂತ್ರಿ ಎಂ. ಚಂದ್ರಬಾಬು ನಾಯ್ಡು ಅವರು ಮಸುದೆ ಅಂಗೀಕಾರವಾದ ಬಗ್ಗೆ ಹೇಳಿಕೆ ನೀಡಿದ್ದು, ರಾಜ್ಯ ವಿಧಾನಮಂಡಲದಲ್ಲಿ ಮಸೂದೆಗೆ ಅಂಗೀಕಾರ ದೊರೆತಿದೆ, ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಅಂಗೀಕೃತ ಮಸೂದೆಯನ್ನು ಅನುಮೋದನೆಗಾಗಿ ರವಾನಿಸಲಾಗುತ್ತದೆ. ಕೇಂದ್ರದ ಅನುಮೋದನೆಯೂ ದೊರೆತ ಬಳಿಕ ಮೀಸಲಾತಿ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮೊದಲು ಸಿ.ಎಂ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ್ದ ಕಾಪು ಸಮುದಾಯದ ಮುಖಂಡರು ನಮಗೆ ರಾಜಕೀಯ ಮೀಸಲಾತಿ ಬೇಡ. ಆದರೆ ಶೈಕ್ಷಣಿಕ ಮತ್ತು ವೃತ್ತಿ ಮೀಸಲಾತಿ ಮಾತ್ರ ಸಾಕು ಎಂದು ಹೇಳಿದ್ದರು. ಹೀಗಾಗಿ ಅವರ ಬೇಡಿಕೆಯನ್ನು ಈಡೇರಿಸಿದ್ದೇವೆ ಎಂದು ಮುಖ್ಯಮಂತ್ರಿ ನಾಯ್ಡು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಕಾಪು ಮುಖಂಡರು ಸಿ.ಎಂ ಚಂದ್ರಬಾಬು ಅವರಿಗೆ ಸಿಹಿ ತಿನ್ನಿಸಿ ಸಂತಸ ಹಂಚಿಕೊಂಡಿದ್ದಾರೆ.

(ಎನ್‍ಬಿಎನ್‍)

Leave a Reply

comments

Related Articles

error: