ಮೈಸೂರು

ಇಬ್ಬರು ಕಾಮುಕರಿಂದ ಅಪ್ರಾಪ್ತೆ ಅತ್ಯಾಚಾರ ಪ್ರಕರಣ : ಗಂಡು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ

ಮೈಸೂರು,ಡಿ.2:- ಇಬ್ಬರು ಕಾಮುಕರಿಂದ ಅತ್ಯಾಚಾರಕ್ಕೊಳಗಾಗಿದ್ದ 15 ವರ್ಷದ ಅಪ್ರಾಪ್ತೆಯೊಬ್ಬಳು ಇದೀಗ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಪಿರಿಯಾಪಟ್ಟಣ ತಾಲೂಕಿನ ಗಂಗನಕುಪ್ಪೆ ಗ್ರಾಮದಲ್ಲಿ ನಡೆದಿದೆ.

ಅತ್ಯಾಚಾರಗೈದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಬೆಟ್ಟದಪುರ ಪೊಲೀಸರು ಅವರನ್ನು ಇದೀಗ ಜೈಲಿಗೆ ಅಟ್ಟಿದ್ದಾರೆ. ಅಕ್ಕನ ಬಾಣಂತನವಿದ್ದ ಕಾರಣ ಸಹಾಯ ಮಾಡುವುದಕ್ಕಾಗಿ ಕಳೆದ ವರ್ಷ ಕೊಡಗು ಜಿಲ್ಲೆಯ ಕೊಡ್ಲಪೇಟೆ ಗ್ರಾಮಕ್ಕೆ ತೆರಳಿದ್ದ ಗಂಗನಗುಪ್ಪೆ ಗ್ರಾಮದ 15 ವರ್ಷದ ಬಾಲಕಿಗೆ ಪಕ್ಕದ ಮನೆಯ ರಾಜು, ಸ್ವಾಮಿ ಎಂಬುವವರು ಆಮಿಷವೊಡ್ಡಿ ಪುಸಲಾಯಿಸಿ ಅವಳ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ.

ಅಲ್ಲದೆ ಆರೋಪಿಗಳು ಈ ವಿಚಾರವನ್ನು ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿಯೂ ಸಹ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಆರೋಪಿಗಳು ಆಕೆಯ ಬಳಿ ವಿಚಾರವನ್ನು ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿಯೂ ಸಹ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಆರು ತಿಂಗಳುಗಳ ಬಳಿಕ ತನ್ನ ಸ್ವಗ್ರಾಮವಾದ ಗಂಗನಗುಪ್ಪೆ ಗ್ರಾಮಕ್ಕೆ ಬಂದ ಮಗಳ ಸ್ಥಿತಿಯನ್ನು ನೋಡಿದ ಆಕೆಯ ಪೋಷಕರು ಮರ್ಯಾದೆಗೆ ಅಂಜಿ ಗುಪ್ತವಾಗಿ ಮನೆಯಲ್ಲಿಯೇ ಇಟ್ಟುಕೊಂಡಿದ್ದರು. ಪರಿಸ್ಥಿತಿ ಅರಿತ ಪೋಷಕರು ಮೂರು ದಿನಗಳ ಹಿಂದೆ ಬಾಲಕಿಯನ್ನು ಆಸ್ಪತ್ರೆಗೆ ಕರೆತಂದಿದ್ದರು. ಆದರೆ, ಸಂತ್ರಸ್ತೆ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ ನಂತರ ಆಸ್ಪತ್ರೆಯಲ್ಲಿ ಈ ವಿಚಾರ ಗೊತ್ತಾಗಿದೆ. ಆಸ್ಪತ್ರೆ ಸಿಬ್ಬಂದಿಯ ತಿಳುವಳಿಕೆ ಮೇರೆಗೆ ತಕ್ಷಣ ಪೋಷಕರು ಬೆಟ್ಟದಪುರ ಪೊಲೀಸ್‌‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  ದೂರು ದಾಖಲಿಸಿಕೊಂಡ ಬೆಟ್ಟದಪುರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: