ಕರ್ನಾಟಕ

ಚಿರತೆ ದಾಳಿಗೆ ಕರು ಬಲಿ : ಬೋನಿಗೆ ಬಿದ್ದ ಚಿರತೆ

ರಾಜ್ಯ(ಮಂಡ್ಯ)ಡಿ.2:- ಚಿರತೆ ದಾಳಿಗೆ ಕರು ಬಲಿಯಾದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ರಾಮನಹಳ್ಳಿಯಲ್ಲಿ ನಡೆದಿದೆ.

ಕಳೆದೊಂದು ತಿಂಗಳಿನಿಂದ ಗ್ರಾಮದ ನಾಲ್ಕು ಹಸುಗಳ ಮೇಲೆ ಚಿರತೆ ದಾಳಿ ನಡೆಸಿ ಸಾವಿಗೆ ಕಾರಣವಾಗಿತ್ತು.  ಮಂಜೇಗೌಡ ಎಂಬುವರಿಗೆ ಸೇರಿದ ಕರುವನ್ನು ಬಲಿ ತೆಗೆದುಕೊಂಡಿತ್ತು. ಚಿರತೆ ದಾಳಿಯಿಂದ ಅಕ್ಕಪಕ್ಕದ ಗ್ರಾಮಸ್ಥರಲ್ಲಿ ಆತಂಕ ಮೂಡಿತ್ತು. ಈ ಹಿನ್ನೆಲೆಯಲ್ಲಿ ಚಿರತೆ ಸೆರೆಗೆ ಬೋನ್ ಇಡಲು ಆಗ್ರಹಿಸಿದ್ದಾರೆ. ಇದೇ ವೇಳೆ ಮತ್ತೊಂದೆಡೆ  ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕಿನ, ದೊಡ್ಡಾಘಟ್ಟ ಗ್ರಾಮದಲ್ಲಿ ಚಿರತೆ ಸೆರೆಗೆ ಬೋನಿಡಲು ಒತ್ತಾಯಿಸಿದ್ದು, ಚಿರತೆ ಬೋನಿಗೆ ಬಿದ್ದಿದೆ. ಗ್ರಾಮದ ಹೊರಭಾಗದ ಗವಿರಂಗಪ್ಪನ ದೇವಸ್ಥಾನದ ಬಳಿ ಕಳೆದ ಎರಡು ದಿನಗಳ ಹಿಂದೆ ಬೋನ್ ಇಡಲಾಗಿತ್ತು. ಇಂದು ಬೋನಿಗೆ ಚಿರತೆ ಬಿದ್ದಿದೆ. ಆಗಾಗ ಅಕ್ಕಪಕ್ಕದ ಗ್ರಾಮಕ್ಕೆ ನುಗ್ಗಿ ಚಿರತೆ ಭೀತಿ ಮೂಡಿಸಿತ್ತು. ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: