ಕರ್ನಾಟಕಪ್ರಮುಖ ಸುದ್ದಿ

ಸಚಿವ ಎಂ.ಬಿ ಪಾಟೀಲರಿಗೆ ಏಕವಚನದಲ್ಲಿ ಧಮಕಿ ಹಾಕಿದ ಬಿಎಸ್‍ವೈ!

ವಿಜಯಪುರ (ಡಿ.2): ರಾಜ್ಯದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರನ್ನು ಏಕವಚನದಲ್ಲಿ ಸಂಭೋದಿಸಿದ ಮಾಜಿ ಸಿಎಂ ಯಡಿಯೂರಪ್ಪ ಅವರು, ನಿನ್ನನ್ನು ಜೈಲಿಗೆ ಕಳುಹಿಸದಿದ್ದರೆ ನನ್ನ ಹೆಸರು ಯಡಿಯೂರಪ್ಪನೇ ಅಲ್ಲ ಎಂದು ಧಮಕಿ ಹಾಕಿದ ಘಟನೆ ನಡೆದಿದೆ.

ಇಂದು (ಶನಿವಾರ) ವಿಜಯಪುರದಲ್ಲಿ ನಡೆದ ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ ಮಾತನಾಡುವಾಗ ತಾಳ್ಮೆ ಕಳೆದುಕೊಂಡು ಯಡಿಯೂರಪ್ಪ, ಸಚಿವ ಎಂ.ಬಿ.ಪಾಟೀಲ್ ಮೇಲೆ ಮನಬಂದಂತೆ ವಾಗ್ದಾಳಿ ನಡೆಸಿದರು. “ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೆ ನೀರಾವರಿ ಹಗರಣಗಳನ್ನು ಬಯಲಿಗೆಳೆದು ಎಂ.ಬಿ.ಪಾಟೀಲರನ್ನು ಜೈಲಿಗೆ ಕಳಿಸುತ್ತೆನೆ ಎಂದು  ಅಬ್ಬರಿಸಿದರು.

ಇಷ್ಟಕ್ಕೇ ಸುಮ್ಮನಾಗದೆ “ಎಂ.ಬಿ.ಪಾಟೀಲ್ ಸೊಕ್ಕಿನಿಂದ ಮೆರೆಯುತ್ತಿದ್ದಾನೆ. ಮುಖ್ಯಮಂತ್ರಿಯನ್ನು ಕಮಿಷನ್ ಏಜೆಂಟ್ ಎಂದರೆ ನೀನು ಮಾನನಷ್ಟ ಕೇಸ್ ಹಾಕ್ತೀಯಾ? ಏ… ಎಂ.ಬಿ ಪಾಟೀಲ ನಿಮ್ಮಂತವರನ್ನು ಬಾಳ ಜನರನ್ನು ನೋಡಿದ್ದೇನೆ ಇಂತಹ ಬೆದರಿಕೆಯನ್ನು ಬಿಟ್ಟುಬಿಡು. ಮರಳಿನ ಜೊತೆಗೆ ಮಣ್ಣು ಸೇರಿಸಿ ಕೆಲಸ ಮಾಡಿಸಿರುವ ನಿನ್ನನ್ನು ಕ್ಷಮಿವುದಿಲ್ಲಲ” ಎಂದು ಯಡಿಯೂರಪ್ಪ ಆವೇಶದಿಂದ ಹಲ್ಲು ಮಸೆದರು.

ಭಾಷಣದುದ್ದಕ್ಕೂ ಎಂ.ಬಿ.ಪಾಟೀಲರ ಮೇಲೆ ಹರಿಹಾಯ್ದ ಯಡಿಯೂರಪ್ಪ ಸಿದ್ದರಾಮಯ್ಯನವರನ್ನು ಮರೆತು ಪಾಟೀಲರನ್ನೇ ಗುರಿಯಾಗಿಸಿಕೊಂಡರು. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಪಾಟೀಲರು, ಲಿಂಗಾಯತರ ಏಕಮೇವಾದ್ವಿತೀಯ ನಾಯಕರಾಗಿದ್ದ ಯಡಿಯೂರಪ್ಪ ಅವರಿಗೆ ಸವಾಲು ಹಾಕಿರುವುದೇ ಈ ಸಿಟ್ಟಿಗೆ ಕಾರಣ ಎನ್ನಲಾಗುತ್ತಿದೆ.

ಪ್ರತ್ಯೇಕ ಧರ್ಮ ಬೇಡಿಕೆಯಿಂದಾಗಿ ಲಿಂಗಾಯತರಲ್ಲಿ ಎರಡು ಬಣ ಉಂಟಾಗಿದ್ದು, ಯುಡಿಯೂರಪ್ಪ ಅವರ ಮತ ಬ್ಯಾಂಕ್ ಒಡಿದಿದೆ ಹೀಗಾಗಿ ಯಡಿಯೂರಪ್ಪ ಅವರು ಪಾಟೀಲರ ಮೇಲೆ ಸಿಟ್ಟಾಗಿದ್ದಾರೆ. ಹೀಗಾಗಿಯೇ ಯಡಿಯೂರಪ್ಪ ಮಾತಿನ ಮಧ್ಯೆ ತೀವ್ರ ಭಾವೋದ್ರೇಕಕ್ಕೆ ಒಳಗಾದಂತೆ ಕಂಡುಬಂದರು.

(ಎನ್‍ಬಿಎನ್‍)

Leave a Reply

comments

Related Articles

error: