ಪ್ರಮುಖ ಸುದ್ದಿಮೈಸೂರು

ಮನೆ ಮುಂದೆ ಕಾರು ನಿಲ್ಲಿಸುವ ಮುನ್ನ ಹುಶಾರು : ಕಾರಿನ ಗಾಜು ಪುಡಿಯಾದೀತು

ಮೈಸೂರು,ಡಿ.3:-ನಿಮ್ಮ ಮನೆ ಮುಂದೆ ಕಾರು ನಿಲ್ಲಿಸುವ ಮುನ್ನ ಜೋಕೆ ಯಾಕೆಂದರೆ ಮನೆ ಮುಂದೆ ನಿಲ್ಲಿಸಿದ ಕಾರಿನ ಗಾಜು ಪುಡಿ ಪುಡಿಯಾಗುತ್ತೆ ಹುಶಾರ್.

ಯಾಕೆಂದರೆ ಮನೆಯೊಂದರ ಮುಂದೆ ನಿಲ್ಲಿಸಲಾಗಿದ್ದ ಕಾರಿನ ಗಾಜಿಗೆ ಕಿಡಿಗೇಡಿಗಳು ಕಲ್ಲು ತೂರಿದ್ದು, ಗಾಜನ್ನು ಪುಡಿಗಟ್ಟಿದ್ದಾರೆ. ಮೈಸೂರು ಟಿ.ಕೆ.ಲೇಔಟ್ ಕಾಮಧೇನು ಬಾರ್ ಬಳಿ ತಡರಾತ್ರಿ ಘಟನೆ ನಡೆದಿದ್ದು, ಯುವರಾಜ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿರುವ ಹೊಳೆನರಸಿಪುರ ಮೂಲಕದ ಅಭಿಷೇಕ್ ಗೆ ಸೇರಿದ ಕಾರನ್ನು ಟಿ.ಕೆ.ಲೇಔಟ್ ನ ತನ್ನ ರೂಮಿನ ಮುಂಭಾಗ ಕಾರು ನಿಲ್ಲಿಸಿದಾಗ ಘಟನೆ ನಡೆದಿದ್ದು, ತಡರಾತ್ರಿ ಕಾರಿನ ಮುಂಭಾಗ,ಹಿಂಭಾಗದ ಗ್ಲಾಸ್ ಜಖಂಗೊಳಿಸಿದ್ದಾರೆ. ಈ ಕುರಿತು ಸರಸ್ವತಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: