ಪ್ರಮುಖ ಸುದ್ದಿಮೈಸೂರು

ವಾಣಿಜ್ಯ ಪ್ರದೇಶಗಳಲ್ಲಿ ವಾಹನಕ್ಕೆ ಪಾರ್ಕಿಂಗ್ ಶುಲ್ಕ ವಿಧಿಸಬಾರದೆಂಬ ಆದೇಶವಿದ್ದರೂ ಶುಲ್ಕ ವಸೂಲು : ಕ್ರಮವಹಿಸುವರೇ ಪಾಲಿಕೆಯ ಅಧಿಕಾರಿಗಳು

ಮೈಸೂರು,ಡಿ.3:- ಮೈಸೂರು ಮಹಾನಗರ ಪಾಲಿಕೆ ಮಾಲ್ ಗಳು ಹಾಗೂ ವಾಣಿಜ್ಯ ಪ್ರದೇಶಗಳಲ್ಲಿ ಯಾವುದೇ ವಾಹನಕ್ಕೆ ಪಾರ್ಕಿಂಗ್ ಶುಲ್ಕ ಪಡೆಯಬಾರದೆಂದು ಆದೇಶ ಮಾಡಿದ್ದರೂ ಪಾಲಿಕೆಯ ಆದೇಶಕ್ಕೆ ಕಿಮ್ಮತ್ತು ನೀಡದೆ ಮಾಲ್ ಗಳ ಅಧಿಕಾರಿಗಳು ದುಬಾರಿ ಪಾರ್ಕಿಂಗ್ ಶುಲ್ಕಕ್ಕೆ ಮುಂದಾಗಿದ್ದು ಸವಾರರು ಕಂಗಾಲಾಗಿದ್ದಾರೆ.

ಪಾಲಿಕೆಯ ಅಧಿಕಾರಿಗಳು ಅನಧಿಕೃತ ಪಾರ್ಕಿಂಗ್ ಶುಲ್ಕಕ್ಕೆ ಬ್ರೇಕ್ ಹಾಕುವ ಹಾಗೂ ಸಾರ್ವಜನಿಕರಿಗೆ ಅನೂಕೂಲವಾಗುವ ಉದ್ದೇಶದಿಂದ ಮಾಲ್‌ಗಳಲ್ಲಿಲ್ಲ.  ಪಾರ್ಕಿಂಗ್ ಶುಲ್ಕವನ್ನು ಪಡೆಯಬಾರದೆಂದು ತಿಳಿಸಿದ್ದರು. ಹಾಗೂ  ಮಾಲ್ ಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದರು. ಅಧಿಕಾರಿಗಳ ಮಾತಿಗೆ ಬೆಲೆಯೇ ಇಲ್ಲದಂತಾಗಿದೆ. ಮಾಲ್ ಆಫ್ ಮೈಸೂರು, ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಹಲವು ಭಾಗಗಳಲ್ಲಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲಾಗುತ್ತಿದೆ. ನಗರ ಪಾಲಿಕೆ ವ್ಯಾಪ್ತಿಯ ಮಾಲ್ ಗಳು ಸೇರಿದಂತೆ ಬಸ್ ನಿಲ್ದಾಣದಲ್ಲಿ  ಪಾರ್ಕಿಂಗ್ ಫ್ರೀ ಎಂದು ಆದೇಶ ಹೊರಡಿಸಿದ್ದರೂ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ನಗರದ ರಸ್ತೆ, ವಾಣಿಜ್ಯ ಸಂಕೀರ್ಣ ಮಾರುಕಟ್ಟೆ, ಆಸ್ಪತ್ರೆ, ಸರಕಾರಿ ಕಚೇರಿ ಆವರಣದಲ್ಲಿ ಪಾರ್ಕಿಂಗ್ ಗೆ ವಿಧಿಸುವ ಅನಧಿಕೃತ ಹಾಗೂ ದುಬಾರಿ ಪಾರ್ಕಿಂಗ್ ಶುಲ್ಕಕ್ಕೆ ವಿವರ ಕೇಳಿದರೆ ವಾಹನದಲ್ಲಿ ಸಂಚರಿಸುವುದು ಬೇಡ ಎಂಬ   ಪರಿಸ್ಥಿತಿಗೆ ಸವಾರರು ಬಂದು ಬಿಟ್ಟಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: