ಕ್ರೀಡೆ

ಲಂಕಾ ವಿರುದ್ಧ ಜಯಿಸಿದ ಭಾರತ

ಭಾರತೀಯ ಪ್ಯಾರಾಲಿಂಪಿಕ್ ವಾಲಿಬಾಲ್ ಫೆಡರೇಷನ್ ಆಶ್ರಯದಲ್ಲಿ ನಡೆಯುತ್ತಿರುವ ಅಂಗವಿಕಲರ ವಾಲಿಬಾಲ್ ಸರಣಿಯ ಮೊದಲ ಪಂದ್ಯದಲ್ಲಿ ಲಂಕಾವನ್ನು ಮಣಿಸಿ, ಭಾರತ ತಂಡ ಜಯಸಾಧಿಸಿದೆ.

ಮೈಸೂರಿನ ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 25-18, 25-17, 25-18 ರಲ್ಲಿ ಭಾರತ ತಂಡ ಶ್ರೀಲಂಕಾ ತಂಡವನ್ನು ಮಣಿಸಿ, 1-0 ಮೂಲಕ ಮುನ್ನಡೆ ಸಾಧಿಸಿದೆ.

ಹಾಸನದ ಮುತ್ತು ಅತ್ಯುತ್ತಮ ಆಟಗಾರ ಗೌರವಕ್ಕೆ ಭಾಜನರಾದರು. ತಮಿಳುನಾಡಿನ ರಾಜಕುಮಾರ್ ಉತ್ತಮ ಸರ್ವ್ ಗಳ ಮೂಲಕ ಪಾಯಿಂಟ್ ಗಿಟ್ಟಿಸಿದರು.

Leave a Reply

comments

Related Articles

error: