ಪ್ರಮುಖ ಸುದ್ದಿಮೈಸೂರು

ಬಂದ್ ಕರೆಯನ್ನು ಹಿಂದೆಗೆದುಕೊಂಡ ಬಿಜೆಪಿ : ಶಾಲಾ ಕಾಲೇಜುಗಳಿಗೆ ರಜೆ

ಮೈಸೂರು,ಡಿ.4:- ಮೈಸೂರಿನ ಹುಣಸೂರಿನಲ್ಲಿ ಹನುಮಜಯಂತಿ ಮೆರವಣಿಗೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದನ್ನು ಖಂಡಿಸಿ ಸೋಮವಾರ ಬಿಜೆಪಿ ಹುಣಸೂರು ಬಂದ್ ಗೆ ಕರೆ ನೀಡಿತ್ತು, ಆದರೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬಿಜೆಪಿ ಬಂದ್ ಕರೆಯನ್ನು ಹಿಂದೆಗೆದುಕೊಂಡಿದೆ.

ಸಂಸದ ಪ್ರತಾಪ್ ಸಿಂಹ ಹಾಗೂ ಹನುಮ ಮಾಲಾಧಾರಿಗಳ ಬಿಡುಗಡೆ ಹಿನ್ನೆಲೆಯಲ್ಲಿ ಬಿಜೆಪಿ ಹುಣಸೂರು ಬಂದ್ ನ್ನು ವಾಪಾಸ್ ಪಡೆದಿದೆ.  ಬಂದ್ ಬದಲು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ,ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಶಿವಣ್ಣ ಮತ್ತಿತರರು ಪಾಲ್ಗೊಂಡಿದ್ದರು.

ಪೊಲೀಸರು ಕಾರಿನಲ್ಲಿ ಬರುತ್ತಿದ್ದ ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸಲು ತೆರಳಿದಾಗ ರ್ಯಾಶ್  ಡ್ರೈವ್ ಮಾಡಿ ಬ್ಯಾರಿಕೇಡ್ ನ್ನು ಎಳೆದೊಯ್ದಿದ್ದರು. ಖುದ್ದು ತಾನೇ ಡ್ರೈವ್ ಮಾಡಿಕೊಂಡು ತೆರಳಿದ್ದರು. ಇದರಿಂದ ಸಂಸದ ಪ್ರತಾಪ್ ಸಿಂಹ ಅವರನ್ನು  ಬಂಧಿಸಿ ಕ್ರಿಮಿನಲ್ ಕೇಸ್ ದಾಖಲಿಸಲಾಗಿತ್ತು.   ಅಷ್ಟೇ ಅಲ್ಲದೇ ಮೆರವಣಿಗೆ ಹೊರಟ ಹಲವರನ್ನು ಪೊಲೀಸರು ಬಂಧಿಸಿದ್ದರು. ಇದನ್ನು ವಿರೋಧಿಸಿ ಬಿಜೆಪಿ ಸೋಮವಾರ ಬಂದ್ ಗೆ ಕರೆ ನೀಡಿತ್ತು. ಮುಂಜಾಗೃತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: