ಕರ್ನಾಟಕ

ನಾಪತ್ತೆಯಾದ ಮಹಿಳೆ ಸಂಬಂಧಿಕರ ಮನೆಯಲ್ಲಿ ಪತ್ತೆ

ಮಂಡ್ಯ,ಡಿ.04: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಸಂಬಂಧಿಕರ ಮನೆಯಲ್ಲಿ ಪತ್ತೆಯಾದ ಘಟನೆ ಮಂಡ್ಯ ಜಿಲ್ಲೆಯ ಕೆಆರ್‍ಪೇಟೆ ಪಟ್ಟಣದಲ್ಲಿ ನಡೆದಿದೆ.

ಸರಸ್ವತಿ(25) ನಾಪತ್ತೆಯಾಗಿದ್ದ ಮಹಿಳೆ. ಮೂರು ದಿನಗಳ ಹಿಂದೆ ಕೆ.ಆರ್.ಪೇಟೆ ಪಟ್ಟಣದ ದೇವೀರಮ್ಮಣ್ಣಿ ಕೆರೆಗೆ ಬಟ್ಟೆ ತೊಳೆಯಲು ಹೋದ ಸಂದರ್ಭದಲ್ಲಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕೆ ವ್ಯಕ್ತವಾಗಿತ್ತು. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸತತವಾಗಿ ಎರಡು ದಿನಗಳ ಕಾಲ ಶವಕ್ಕಾಗಿ ಶೋಧ ನಡೆಸಿದ್ದರು. ಆದರೆ ಗೃಹಿಣಿ ಬೆಂಗಳೂರಿನ ಶಿವಾಜಿನಗರದಲ್ಲಿನ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾರೆ. ನಂತರ ಬಂಧುಗಳು ಗೃಹಿಣಿಯನ್ನು ಕೆ.ಆರ್.ಪೇಟೆಗೆ ಕರೆ ತಂದಿದ್ದಾರೆ. ಸತ್ತಿದ್ದಾರೆಂದು ತಿಳಿದಿದ್ದ ಮಹಿಳೆ ಬದುಕಿರುವುದು ಗೊತ್ತಾಗಿ ಮನೆಯವರಿಗೆ ಆತಂಕದ ದೂರಾಗಿದೆ. ( ವರದಿ: ಪಿ. ಎಸ್ )

Leave a Reply

comments

Related Articles

error: