ಪ್ರಮುಖ ಸುದ್ದಿಮೈಸೂರು

ಸಂಸದ ಪ್ರತಾಪ್ ಸಿಂಹ ಬೇಲ್ ಖಂಡಿಸಿ ಎಸ್ ಡಿಪಿಐ ನಿಂದ ಪ್ರತಿಭಟನೆ

ಮೈಸೂರು, ಡಿ.4 : ಜಿಲ್ಲೆಯ ಹುಣಸೂರು ತಾಲ್ಲೂಕಿನಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವು ಸಂಘ ಪರಿವಾರದ ಪೂರ್ವ ನಿಯೋಜಿತ ಕಾರ್ಯಕ್ರಮವಾಗಿದ್ದು, ಇದರ ರೂವಾರಿಯಾದ ಸಂಸದ ಪ್ರತಾಪ್ ಸಿಂಹ ಅವರ ಬೇಲ್ ಖಂಡಿಸಿ ಇಂದು ಸಂಜೆ 4 ಗಂಟೆಗೆ ಅಶೋಕ ರಸ್ತೆಯ ಮಿಲಾದ್ ಬಾಗ್ ನಲ್ಲಿ ಎಸ್.ಡಿಪಿಐ ಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ತಿಳಿಸಿದರು

ಸಂಸದ ಪ್ರತಾಪ್ ಸಿಂಹ ಅವರ ಹಠಮಾರಿ ಧೋರಣೆಯಿಂದ ನಿಷೇಧಾಜ್ಞೆಯಿದ್ದ ಮಾರ್ಗದಲ್ಲಿಯೇ ಮೆರವಣಿಗೆ ಕೊಂಡೊಯ್ಯಲು ಯತ್ನಿಸಿರುವುದು ಸಾಮಾಜಿಕ ಶಾಂತಿ ಕದಡಿ, ಕೋಮು ಗಲಭೆ ಸೃಷ್ಠಿಸುವ ಹುನ್ನಾರವಾಗಿದೆ, ಇದರ ಹೊರತಾಗಿ ಕರ್ತವ್ಯ ನಿರತ ಪೊಲೀಸಿನವರ ಮೇಲೆ ದಬ್ಬಾಳಿಕೆ ನಡೆಸಿರುವುದು ನಾಚಿಕೆಗೇಡಿನ ಕೃತ್ಯ, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದರ ಮೇಲೆ ಕೋಮು ಗಲಭೆ ಪ್ರಚೋಧನೆ, ಪ್ರತಿಭಟನೆಗೆ ಕುಮ್ಮಕ್ಕು ಸೇರಿದಂತೆ ಹಲವಾರು  ಗುರುತರ ಆರೋಪವಿದ್ದರು ಇವರಿಗೆ ಬೇಲ್ ನೀಡಿರುವುದು ಖಂಡನಾರ್ಹವೆಂದು ದೂರಿ,  ಸಂಸದ ಪ್ರತಾಪ್ ಸಿಂಹ ಗೂಂಡಾವರ್ತನೆ  ಖಂಡಿಸುವುದು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಸೋಮವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನುಡಿದರು.

ಚುನಾವಣೆ ಸಮೀಪಿಸುತ್ತಿದ್ದು  ಸಮಾಜದಲ್ಲಿ ಶಾಂತಿ ಸಾಮರಸ್ಯ ಕದಡಿ, ಕೋಮು ಗಲಭೆ ಸೃಷ್ಠಿಸುವ ಮೂಲಕ ಅದರ  ಲಾಭ ಪಡೆಯಲು ಬಿಜೆಪಿ ಹವಣಿಸುತ್ತಿದೆ,  ತಪ್ಪಿತಸ್ಥರ ಮೇಲೆ  ಕ್ರಮ ಜರುಗಿಸದೇ ರಾಜ್ಯ ಸರ್ಕಾರ ತಟಸ್ಥರಾಗಿದ್ದು, ಸರ್ಕಾರದ ವೈಫಲ್ಯ ಎತ್ತಿ ತೋರುತ್ತಿದೆ, ಗೃಹ ಸಚಿವರು ಕರ್ತವ್ಯ ಬೇಜವಾಬ್ದಾರಿ ಮೆರೆದಿದ್ದಾರೆ ಎಂದು ದೂರಿದರು.

ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ, ಸಂಸದ ಪ್ರತಾಪ್ ಸಿಂಹ ಕುಮ್ಮಕ್ಕಿನಿಂದ ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿಯಲ್ಲಿ ಗೋರಿಗಳ ನಾಶ ಮಾಡಿ ಕೋಟ್ಯಾಂತರ ರೂಪಾಯಿಗಳ ವಕ್ಫ್ ಆಸ್ತಿ ಕಬಳಿಕೆಯ ಹುನ್ನಾರ ನಡೆದಿದೆ, ಅಲ್ಲದೇ, ಶಾಂತಿ ಸಾಮರಸ್ಯದ ಸ್ಥಳವಾದ ಹುಣಸೂರಿನಲ್ಲಿ ಕೋಮುಭಾವನೆ ಕೆರಳಿಸಿದ್ದಾರೆ, ಇದಲ್ಲದೇ ಪೂರ್ವ ನಿಯೋಜನೆಯಂತೆ ಆರ್.ಎಸ್.ಎಸ್, ಸಂಘ ಪರಿವಾರ ಹಾಗೂ ಭಜರಂಗದ ಕಾರ್ಯಕರ್ತರು ಸಮಾಜದಲ್ಲಿ ಶಾಂತಿ ಕದಡುತ್ತಿದ್ದು ಅಂತಹವರನ್ನು ಶೀಘ್ರವೇ ಬಂಧಿಸಿ ಕ್ರಮ ಕೈಗೊಳ್ಳಬೇಕಿತ್ತು, ಆದರೆ ಸಮಾಜದಲ್ಲಿ ಶಾಂತಿ ಕಾಪಾಡಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿ ಎಂದು ದೂರಿದರು.

ಬಾಬರಿ ಮಸೀದಿ ಧ್ವಂಸಗೊಂಡು 25 ವರ್ಷ ಸಂದ ಹಿನ್ನಲೆಯಲ್ಲಿ ಇದೇ ಡಿ.6ರಂದು ರಾಷ್ಟ್ರಾಧ್ಯಂತ ‘ರಾಷ್ಟ್ರೀಯ ಅವಮಾನ’ ದಿನ ಆಚರಿಸುತ್ತಾ, ಅಂದು ವಿಚಾರ ಸಂಕಿರಣ, ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ. ಇದರಂತೆ ನಗರದಲ್ಲಿಯೂ ವಾರ್ಡ್ ವಿಭಾಗಗಳಲ್ಲಿ ಹಂತ ಹಂತಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು ಮಸೀದಿ ಧ್ವಂಸ ಘಟನೆಗೆ ಸಂಬಂಧಿಸಿದಂತೆ ಲಿಬರ್ಹನ್ ಆಯೋಗ ಹೆಸರಿಸುವವರ ವಿರುದ್ಧ ಇದುವರೆಗೂ ಕ್ರಮಕೈಗೊಳ್ಳದೇ ಜರುಗಿಸದೇ ಇರುವುದು ಬೇಸರದ ಸಂಗತಿಯೆಂದರು.

ಗೋಷ್ಠಿಯಲ್ಲಿ ಎಸ್ ಡಿಪಿಐ ನಗರಾಧ್ಯಕ್ಷ ಅಝೂಂ ಪಾಷ, ಕಾರ್ಯದರ್ಶಿ ಕೌಶಾನ್ ಬೇಗ್, ಜಂಟಿ ಕಾರ್ಯದರ್ಶಿ ಮುಜಮ್ಮಿಲ್ ಖಾನ್ ಮೊದಲಾದವರು ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: