ಕರ್ನಾಟಕಮೈಸೂರು

ಸೆ. 8-12: ‘ಇಂಟರ್ನೆಟ್ ಆಫ್ ಥಿಂಗ್ಸ್’ ಬೋಧನಾ ಕೌಶಲವೃದ್ಧಿ ಕಾರ್ಯಕ್ರಮ

ಮೈಸೂರು: ಡಾ. ಶ್ರೀ ಶಿವರಾತ್ರಿರಾಜೇಂದ್ರ ಮಹಾಸ್ವಾಮಿ ಅವರ ಜನ್ಮ ಶತಮಾನೊತ್ಸವ ಆಚರಣೆ ಅಂಗವಾಗಿ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದ ವತಿಯಿಂದ ಸೆ.8 ರಿಂದ 12 ರ ವರೆಗೆ ‘ಇಂಟರ್ನೆಟ್ ಆಫ್ ಥಿಂಗ್ಸ್ ಅಂಡ್ ಅಪ್ಲಿಕೇಷನ್ಸ್’ ವಿಷಯಕ್ಕೆ ಸಂಬಂಧಿಸಿದಂತೆ ಬೋಧನಾ ಕೌಶಲವೃದ್ಧಿ ಕಾರ್ಯಕ್ರಮವನ್ನು ಆಯೋಜಿಸಿಲಾಗಿದೆ.

ವಿಶ್ವಬ್ಯಾಂಕ್ ನೆರವಿನೊಂದಿಗೆ ಭಾರತ ಸರ್ಕಾರವು ಕೈಗೊಂಡಿರುವ ಯೋಜನೆಯಾದ ಟೆಕ್ನಿಕಲ್ ಎಜುಕೇಶಷನ್ ಕ್ವಾಲಿಟಿ ಇಂಪ್ರೂವ್‍ಮೆಂಟ್‍ (TEQIP) 2ನೇ ಹಂತದ ಪ್ರಾಯೋಜಕತ್ವದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವು ಮೈಸೂರಿನ ಜೆಎಸ್‍ಎಸ್‍ ಟೆಕ್ನಿಕಲ್ ಇನ್ಸ್‍ಟಿಟ್ಯೂಷನ್ ಕ್ಯಾಂಪಸ್‍ನಲ್ಲಿರುವ ಎಸ್‍ಜೆಸಿಇ ಎಂಬಿಎ ಬ್ಲಾಕ್‍ನ ಕಾನ್ಫರೆನ್ಸ್ ಹಾಲ್‍ನಲ್ಲಿ ನಡೆಯಲಿದ್ದು, ಸೆ. 8 ರ ಬೆಳಿಗ್ಗೆ 9.45 ಕ್ಕೆ ಉದ್ಘಾಟನೆ ಯಾಗಲಿದೆ. ಮುಖ್ಯ ಅತಿಥಿಗಳಾಗಿ ಅಮೆರಿಕದ ವಾಲಿಡಸ್ ಟೆಕ್ನಾಲಜೀಸ್‍ನ ತಾಂತ್ರಿಕ ಸಲಹೆಗಾರು ಮತ್ತು IMPAS India ಅಧ್ಯಕ್ಷರಾದ ಡಾ. ಎಂ.ಹೆಚ್. ಕೋರಿ ಭಾಗವಹಿಸಲಿದ್ದಾರೆ. ಎಸ್‍ಜೆಸಿಇ ಪ್ರಾಂಶುಪಾಲ ಪ್ರೊ.ಸೈಯ್ಯದ್ ಶಖೀಬ್ ಉರ್ ರಹಮಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ವಿಶೇಷ ಆಹ್ವಾನಿತರಾಗಿ ಉಪಪ್ರಾಂಶುಪಾಲರುಗಳಾದ ಪ್ರೊ. ಬಿ. ಶಿವಮೂರ್ತಿ, ಪ್ರೊ.ಜಿ.ಎಂ. ಶಶಿಧರ ಹಾಗೂ ಟೆಕ್ವಿಪ್ 2ನೇ ಹಂತದ ಸಂಚಾಲಕ ಪ್ರೊ. ಎಸ್.ಕೆ. ಪ್ರಸಾದ್ ಉಪಸ್ಥಿತರಿರುತ್ತಾರೆ.

ಯಾರಿಗೆ ಉಪಯೋಗ?

ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇನ್ಸ್, ಕಂಪ್ಯೂಟರ್ ಸೈನ್ಸ್, ಕಮ್ಯುನಿಕೇಷನ್ ಇಂಜಿನಿಯರಿಂಗ್, ಇನ್ಫೋಮೇಷನ್ ಸೈನ್ಸ್, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಅಂಡ್ ಇನ್ಸ್‍ಟ್ರುಮೆಂಟೇಷನ್ ಟೆಕ್ನಾಲಜಿ, ಟೆಲಿಕಮ್ಯೂನಿಕೇಷನ್ ಎಂಜಿನಿಯರಿಂಗ್, ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್ ವಿಷಯಗಳ ಬೋಧನಾ ವರ್ಗ, ಸಂಶೋಧನಾ ನಿರತರು, ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆಯಬಹುದಾಗಿದೆ.

Leave a Reply

comments

Related Articles

error: