ಪ್ರಮುಖ ಸುದ್ದಿಮೈಸೂರು

ಮೈಸೂರು ಎಸ್ಪಿ ಆಳುವ ಪಕ್ಷದ ಆಳು ಎಂದು ಟ್ವಿಟ್ ಮಾಡಿದ್ದ ಸಂಸದ ಪ್ರತಾಪ್ ಸಿಂಹಗೆ ಎಸ್ಪಿ ರವಿ ಡಿ ಚನ್ನಣ್ಣನವರ್ ಪರೋಕ್ಷ ಟಾಂಗ್

ಮೈಸೂರು,ಡಿ.4:- ಮೈಸೂರು ಹುಣಸೂರು ಹನುಮ ಜಯಂತಿ ಗಲಾಟೆ ವಿವಾದಕ್ಕೆ ಸಂಬಂಧಿಸಿದಂತೆ ಮೈಸೂರು ಎಸ್ಪಿ ಆಳುವ ಪಕ್ಷದ ಆಳು ಎಂದು ಟ್ವಿಟ್ ಮಾಡಿದ್ದ ಸಂಸದ ಪ್ರತಾಪ್ ಸಿಂಹಗೆ ಎಸ್ಪಿ ರವಿ ಡಿ ಚನ್ನಣ್ಣನವರ್ ಪರೋಕ್ಷ ಟಾಂಗ್ ನೀಡಿದ್ದಾರೆ.

ನಾವು ಯಾರ ಪರವೂ ಅಲ್ಲ. ಯಾರ ವಿರುದ್ಧವೂ ಅಲ್ಲ. ಸತ್ಯದ ಪರ. ಬಡವರ ಪರ. ಸರ್ವರ ಹಿತ ಕಾಯುವುದೇ ನಮ್ಮ ಉದ್ದೇಶ. ಸಂವಿಧಾನದ ನಿರ್ದೇಶನದಂತೆ ನಾವು ಕೆಲಸ ನಿರ್ವಹಿಸುತ್ತೇವೆ ಎಂದು ಮೈಸೂರು ಎಸ್ಪಿ ರವಿ.ಡಿ ಚನ್ನಣ್ಣನವರ್ ತಿಳಿಸಿದ್ದಾರೆ. ದತ್ತ ಜಯಂತಿಗೆ ಸಕಲ ವ್ಯವಸ್ಥೆ ಮಾಡಿದ ಎಸ್.ಪಿ ಅಣ್ಣಾಮಲೈ. ಸರ್ಕಾರವನ್ನು ಎದುರು ಹಾಕಿಕೊಂಡ ಡಿಐಜಿ ರೂಪ. ಮೆಡಿಕಲ್ ಸೀಟ್ ಬ್ಲಾಕಿಂಗ್ ಹಗರಣ ತಡೆದ ಐಎಎಸ್ ಅಧಿಕಾರಿ ರಶ್ಮಿ ನೋಡಿ ಕಲಿಯಿರಿ, ಭಾಷಣ ನಿಲ್ಲಿಸಿ ಎಂದು ಸಂಸದ ಪ್ರತಾಪ್ ಸಿಂಹ  ಟ್ವೀಟರ್ ನಲ್ಲಿ  ಹಾಕಿರುವ ಕುರಿತು ಮಾತನಾಡಿದ ಅವರು, ನಾವು ಎಂದೂ ಪರಿಪೂರ್ಣರಲ್ಲ. ಕಲಿಯುವುದು ಇದ್ದೇ ಇದೆ. ಎಸ್ಪಿ ಅಣ್ಣಾಮಲೈ ಅವರಿಂದ ಹಿಡಿದು ಪೇದೆಯವರೆಗೂ ಕಲಿಯುವುದು ಇದೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: