ಮೈಸೂರು

ಮೋದಿಯ ಆರ್ಥಿಕ ನಡೆಯಿಂದ ಬದಲಾವಣೆ ಕಷ್ಟಸಾಧ್ಯ : ಅರವಿಂದ ಮಾಲಗತ್ತಿ

ಭಾರತದ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿರುವ ನಿರ್ಧಾರ ಆರ್ಥಿಕ ನಡೆಯ ವಿಚಾರಕ್ಕೆ ಸಂಬಂಧಿಸಿದ್ದರೂ, ಸಾಮಾಜಿಕ ಮತ್ತು ಧಾರ್ಮಿಕ ಬದಲಾವಣೆ ಕಷ್ಟಸಾಧ್ಯ ಎಂದು  ಮಾನಸ ಗಂಗೋತ್ರಿಯ ಕುವೆಂಪು ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಅರವಿಂದ ಮಾಲಗತ್ತಿ ಹೇಳಿದ್ದಾರೆ.

ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಸಮುದಾಯ ಕರ್ನಾಟಕ ವತಿಯಿಂದ ಎರಡು  ದಿನಗಳ ಕಾಲ ಏರ್ಪಡಿಸಲಾಗಿರುವ ಆರನೇ ರಾಜ್ಯ ಸಮ್ಮೇಳನ ಪ್ರಯುಕ್ತ ಸಾಂಸ್ಕೃತಿಕ ಪ್ರತಿರೋಧಗಳ ಮಾದರಿಗಳು ಕುರಿತ ವಿಚಾರ ಸಂಕಿರಣವನ್ನು ಭಾನುವಾರ ಅರವಿಂದ ಮಾಲಗತ್ತಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ದೇಶವ್ಯಾಪಿ ಸಂಚಲನ ಮೂಡಿಸಿರುವ 500 ಹಾಗೂ 2000 ಮುಖ ಬೆಲೆಯ ನೋಟು ಬದಲಾವಣೆ ಕ್ರಾಂತಿಕಾರಿ ಹೆಜ್ಜೆ ಎನಿಸಿದರೂ ಮುಂದಿನ ದಿನಗಳಲ್ಲಿ 2000ಮುಖಬೆಲೆಯ ನೋಟು ಬೇರೆ ವಿಷಯಗಳಿಗೆ ಪರೋಕ್ಷವಾಗಿ ಕುಮ್ಮಕ್ಕು ನೀಡಲಿದ್ದು ನಿಜ ಬಂಡವಾಳವೇನೆಂಬುದು ತಿಳಿಯಲಿದೆ ಎಂದರು.

ವೇದಿಕೆಯಲ್ಲಿ  ರಂಗಾಯಣದ ಮಾಜಿ ನಿರ್ದೇಶಕ ಹೆಚ್.ಜನಾರ್ದನ, ಸಮುದಾಯ ಪ್ರಧಾನ ಕಾರ್ಯದರ್ಶಿ ಟಿ.ಸುರೇಂದ್ರರಾವ್, ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: