ಮೈಸೂರು

ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಜಿ.ವಿ.ರಾಮಮೂರ್ತಿ ಆಯ್ಕೆ

ಮೈಸೂರು ವಕೀಲರ ಸಂಘದ ಅಧ್ಯಕ್ಷರ ಆಯ್ಕೆಯಲ್ಲಿ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಞರಾಗಿ ಜಿ.ವಿ.ರಾಮಮೂರ್ತಿ, ಉಪಾಧ್ಯಕ್ಞರಾಗಿ ಪ್ರಭು ಆಯ್ಕೆಯಾಗಿದ್ದಾರೆ.

ಭಾನುವಾರ ವಕೀಲರ ಸಂಘದ ಚುನಾವಣೆ ನಡೆದಿತ್ತು. ಕಾರ್ಯದರ್ಶಿಯಾಗಿ ಕೆ.ಪಿ.ಸುರೇಶ್, ಜಂಟಿಕಾರ್ಯದರ್ಶಿಯಾಗಿ ಸಿ.ಹೆಚ್.ಈಶ್ವರ್, ಮಹಿಳಾ ಮೀಸಲು ವಿಭಾಗದ ಜಂಟಿ ಕಾರ್ಯದರ್ಶಿಯಾಗಿ ಪೂರ್ಣಿಮಾ, ಖಜಾಂಚಿಯಾಗಿ ಪ್ರಸನ್ನ ಆಯ್ಕೆಯಾಗಿದ್ದಾರೆ.

ಶೇ.83ರಷ್ಟು ಮತದಾನವಾಗಿದ್ದು, ಸಂಘದಲ್ಲಿ ಒಟ್ಟು 2470 ಸದಸ್ಯರಿದ್ದರು. ಅವರಲ್ಲಿ 2053ಮಂದಿ ಮತ ಚಲಾಯಿಸಿದ್ದಾರೆ. ರಾತ್ರಿ 9.30ರವೇಳೆ ವಿಜೇತರಾರೆಂದು ಘೋಷಣೆ ಮಾಡಲಾಯಿತು.

ಚುನಾವಣಾಧಿಕಾರಿಯಾಗಿ ಹರೀಶ್ ಕುಮಾರ್ ಕರ್ತವ್ಯ ನಿರ್ವಹಿಸಿದರು.

Leave a Reply

comments

Related Articles

error: