ಕರ್ನಾಟಕಮೈಸೂರು

ಹೆಚ್ಚಿನ ದರದಲ್ಲಿ ಉಪ್ಪು ಮಾರಾಟ ಮಾಡಿದರೆ ಕಠಿಣ ಕ್ರಮ : ಖಾದರ್

ರಾಜ್ಯದಲ್ಲಿ ಎಲ್ಲಿಯೂ ಉಪ್ಪು ಕೊರತೆ ಇಲ್ಲ. ಕೆಲವೆಡೆ ಉಪ್ಪು ಕೊರತೆ ಇದೆ ಎಂಬ ಗೊಂದಲ ಸೃಷ್ಟಿಸಲಾಗಿದ್ದು ಈ ಕುರಿತು ಅಧಿಕಾರಿಗಳಿಂದ ವರದಿ ಕೇಳಲಾಗಿದೆ. ಹೆಚ್ಚಿನ ದರದಲ್ಲಿ ಉಪ್ಪು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ತಿಳಿಸಿದರು.

ಬೆಂಗಳೂರಿನಲ್ಲಿ ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿದ ಸಚಿವ ಯು.ಟಿ.ಖಾದರ್ ಮಾತನಾಡಿ ಯಾವುದೇ ಆಹಾರ ಸಾಮಗ್ರಿಗಳನ್ನು ನಿಗದಿತ ಮಟ್ಟಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿಟ್ಟರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರಲ್ಲದೆ ಜನತೆಯಲ್ಲಿ ಉಪ್ಪಿನ ಅಭಾವವಿದೆ ಎನ್ನುವ ತಪ್ಪು ಕಲ್ಪನೆ ಬೇಡ. ಅನವಶ್ಯಕ ಗೊಂದಲಕ್ಕೀಡಾಗುವ ಅಗತ್ಯವಿಲ್ಲ ಎಂದು ಸ್ಪಷ್ಟ ಪಡಿಸಿದರು.

Leave a Reply

comments

Related Articles

error: