ಮೈಸೂರು

ಹಣ ಎಗರಿಸಿ ಪರಾರಿ

ಹಣವನ್ನು ಬ್ಯಾಂಕ್ ಗೆ ಠೇವಣಿ ಇರಿಸಲು ಬಂದ ವ್ಯಕ್ತಿಯಿಂದ  ಯಾರೋ ದುಷ್ಕರ್ಮಿಗಳು ಹಣ ಎಗರಿಸಿ ಪರಾರಿಯಾದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಕೆನರಾ ಬ್ಯಾಂಕ್ ಗೆ 500 ಹಾಗೂ 1000ಮುಖಬೆಲೆಯ ನೋಟನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ರಾಮಾಚಾರಿ ಎಂಬವರು 35 ಸಾವಿರ ರೂಪಾಯಿಗಳನ್ನು ಠೇವಣಿ ಇರಿಸಲು ತೆರಳಿದ್ದರು. ಅವರು ಚಲನ್ ಬರೆಯುತ್ತಿದ್ದ ವೇಳೆ ಅಲ್ಲಿಗಾಗಮಿಸಿದ ಯಾರೋ ದುಷ್ಕರ್ಮಿಗಳು ಅವರಿಂದ 35ಸಾವಿರ ರೂಪಾಯಿ ಹಣ ಎಗರಿಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. 1000 ಮುಖಬೆಲೆಯ ನಾಲ್ಕುನೋಟುಗಳು ಮತ್ತು 500ಮುಖಬೆಲೆಯ ನೋಟುಗಳನ್ನು ಮಾತ್ರ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.  ಈ ಕುರಿತು ಬೆಟ್ಟದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: