ಸುದ್ದಿ ಸಂಕ್ಷಿಪ್ತ

ಡಿ.6 ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ದೃಶ್ಯ ರೂಪಕ ಪ್ರದರ್ಶನ

ಮೈಸೂರು, ಡಿ.4 : ಮೈಸೂರು ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಪೀಠ, ಸಂಶೋಧನ ಹಾಗೂ ವಿಸ್ತರಣಾ ಕೇಂದ್ರದಿಂದ ಡಿ.6ರಂದು ಬೆಳಗ್ಗೆ 10.30ಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 61ನೇ ವರ್ಷದ ಪರಿನಿರ್ವಾಣ ದಿನದ ನೆನಪಿನ ಅಂಗವಾಗಿ ಡಾ.ಅಂಬೇಡ್ಕರ್ ಕುರಿತ ಛಾಯಾಚಿತ್ರ ಹಾಗೂ ಭಾರತ ಭಾಗ್ಯವಿಧಾತ’ ದೃಶ್ಯರೂಪಕ ಪ್ರದರ್ಶನವನ್ನು ಮಾನಸಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದಲ್ಲಿ ಆಯೋಜಿಸಿದೆ.

ಕಾರ್ಯಕ್ರಮವನ್ನು ಪ್ರಭಾರಿ ಕುಲಪತಿ ಪ್ರೊ.ಸಿ.ಬಸವರಾಜು ಉದ್ಘಾಟಿಸುವರು, ಡಾ.ಬಿ.ಆರ್.ಅಂಬೇಡ್ಕರ್ ಪೀಠದ ಎಸ್.ವೆಂಕಟೇಶ್ ಅಧ್ಯಕ್ಷತೆ ವಹಿಸುವರು. ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಈ.ಧನಂಜಯ ಅವರಿಂದ ಅಂಬೇಡ್ಕರ್ ಜೀವನ ಹಾಗು ಸಾಧನೆ ಕುರಿತು ಉಪನ್ಯಾಸ ನೀಡುವರು. (ಕೆ.ಎಂ.ಆರ್)

Leave a Reply

comments

Related Articles

error: