ಮೈಸೂರು

ಉಪ್ಪಿನ ದಾಸ್ತಾನಿದೆ, ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ : ಜಿಲ್ಲಾಧಿಕಾರಿ ಡಿ.ರಂದೀಪ್

ಅಡುಗೆ ಉಪ್ಪು ಕೊರತೆ ಉಂಟಾಗಿ ದರ ಏರಿಕೆಯಾಗುತ್ತದೆ ಎನ್ನುವುದು ಕೇವಲ ಸುಳ್ಳು ವದಂತಿ. ಸಾರ್ವಜನಿಕರಲ್ಲಿ ಗೊಂದಲವುಂಟು ಮಾಡಲು ಕೆಲವು ಸಮಾಜಘಾತುಕರು ವದಂತಿಯನ್ನು ಹಬ್ಬಿಸಿ ಜನರ ನೆಮ್ಮದಿಯನ್ನು ಕದುಡುತ್ತಿದ್ದಾರೆ. ಈ ಬಗ್ಗೆ ಆತಂಕಬೇಡ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದ್ದಾರೆ.

ದೇಶದಲ್ಲಿ ಮುಂದಿನ ದಿನಗಳಲ್ಲಿ ಉಪ್ಪಿನ ತೀವ್ರ ಕೊರತೆ ಎದುರಾಗಲಿದೆ. ಉಪ್ಪಿನ ದರದಲ್ಲಿ ಗಣನೀಯ ಏರಿಕೆಯಾಗುವುದು ಎನ್ನುವ ವದಂತಿಯೂ ಜಿಲ್ಲೆಯಾದ್ಯಂತ ಹರಿದಾಡುತ್ತಿದ್ದು ಇದರಿಂದ ಭಯಬೀತರಾದ ಸಾರ್ವಜನಿಕರು ಉಪ್ಪಿನ ಖರೀದಿಗೆ ಮುಗಿಬಿದ್ದಿದ್ದರು. ಸಮಯ ದುರುಪಯೋಗಪಡಿಸಿಕೊಂಡ ಕೆಲ ವರ್ತಕರು ಉಪ್ಪಿನ ದರದಲ್ಲಿ ಏರಿಕೆ ಮಾಡಿ ಮಾರಾಟ ಮಾಡಲು ಶುರುವಿಟ್ಟರು. ಪರಿಸ್ಥಿತಿಯನ್ನು ಅವಲೋಕಿಸಿದ ಜಿಲ್ಲಾಧಿಕಾರಿ ಉಪ್ಪನ್ನು ನಿಗದಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ ವರ್ತಕರ ವಿರುದ್ಧ ಕ್ರಮ ಕೈಗೊಂಡು ಲೈಸೆನ್ಸ್ ರದ್ದುಪಡಿಸುವ ಬಗ್ಗೆ ಕಟ್ಟುನಿಟ್ಟಿನ ಮೌಖಿಕ ಆದೇಶವನ್ನು ಹೊರಡಿಸಿದ್ದರು.

ಉಪ್ಪು ದಾಸ್ತಾನು ಇದ್ದು ಇದಕ್ಕೆ ಸಾರ್ವಜನಿಕರು ಗೊಂದಲಕ್ಕೀಡಾಗುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದು, ವರ್ತಕರು ಅಕ್ರಮವಾಗಿ ದಸ್ತಾನು ಮಾಡಿ ಕೃತಕ ಅಭಾವ ಸೃಷ್ಠಿಸಬಾರದು. ಹೆಚ್ಚಿನ ದಾಸ್ತಾನು ಕಂಡು ಬಂದಲ್ಲಿ ಅಂತಹ ವರ್ತಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

Leave a Reply

comments

Related Articles

error: