ಮೈಸೂರು

ಭಾನುವಾರವೂ ಕಾಣಿಸಿಕೊಂಡ ಚಿರತೆ

ಮೈಸೂರಿನ ಗೌರಿಶಂಕರ ನಗರಕ್ಕೆ ಕೇವಲ ಅರ್ಧ ಕಿಲೋಮೀಟರ್ ದೂರವಿರುವ ಚಾಮುಂಡಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಭಾನುವಾರ ಬಂಡೆಯೊಂದರ ಮೇಲೆ ಮತ್ತೆ ಚಿರತೆಯೊಂದು ಸಾರ್ವಜನಿಕರಿಗೆ ಕಾಣಸಿಕ್ಕಿದೆ.

ತಾಲೂಕಿನಲ್ಲಿ ಚಿರತೆಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು ನಗರಕ್ಕೆ ಅತ್ಯಂತ ಸಮೀಪದಲ್ಲಿಯೇ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಕಳೆದ ಕೆಲವು ವಾರಗಳ ಹಿಂದೆಯೇ ಸ್ಥಳಿಯರಲ್ಲಿ ಚಿರತೆಯಿದೆಯೇನೋ ಎನ್ನುವ ಅನುಮಾನ ಮೂಡಿತ್ತು. ಅಲ್ಲಲ್ಲಿ ಚಿರತೆಯ ಹೆಜ್ಜೆಗಳು ಮೂಡಿದ್ದವಲ್ಲದೇ ಬೀದಿನಾಯಿಗಳು ಗಾಬರಿಯಿಂದ ಓಡುತ್ತಿದ್ದವು. ಅಷ್ಟೇ ಅಲ್ಲದೆ ಹಲವು ನಾಯಿಗಳು ಕಾಣೆಯಾಗಿದ್ದವು ಎನ್ನಲಾಗಿದ್ದು, ಕೊನೆಗೂ ಬಂಡೆಯೊಂದರ ಮೇಲೆ ಕಾಣಿಸಿಕೊಂಡು ತನ್ನ ಅಸ್ತಿತ್ವವನ್ನು ರುಜುವಾತುಪಡಿಸಿದೆ.

ಸ್ಥಳೀಯರು ಅರಣ್ಯ ಇಲಾಖಾಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಭಾನುವಾರ ಕಾಣಿಸಿಕೊಂಡ ಚಿರತೆಯನ್ನು ಇಲಾಖಾಧಿಕಾರಿಗಳು ಪಟಾಕಿ ಸಿಡಿಸುವ ಮೂಲಕ ಹಿಮ್ಮೆಟ್ಟಿಸುವಲ್ಲಿ ಸಫಲರಾಗಿದ್ದಾರೆ ಎನ್ನಲಾಗಿದೆ. ಆದರೂ ಮತ್ತೆ ಯಾವಾಗ ಚಿರತೆ ಪ್ರತ್ಯಕ್ಷವಾಗಲಿದೆಯೋ ಎಂಬ ಆತಂಕದಲ್ಲಿ ಸ್ಥಳೀಯರಿದ್ದಾರೆ.

Leave a Reply

comments

Related Articles

error: