ಪ್ರಮುಖ ಸುದ್ದಿಮೈಸೂರು

ಬಾಲ್ಯ ವಿವಾಹ ತಡೆದ ನಗರದ ಸಿಸಿಬಿ ಪೊಲೀಸರು

ಅಶೋಕಪುರಂ ಪೊಲೀಸ್ ಠಾಣಾ ಸರಹದ್ದಿನ  ವ್ಯಾಪ್ತಿಯ ಬೆಟ್ಟದಪುರ ಸಂಕೇತಿ ಸಂಘದ ಕಲ್ಯಾಣ ಮಂಟಪದಲ್ಲಿ ಜರುಗುತ್ತಿದ್ದ ಬಾಲ್ಯ ವಿವಾಹವನ್ನು ನಗರದ ಸಿಸಿಬಿ ಪೊಲೀಸರು ತಡೆದು ಪೋಷಕರಿಗೆ ನೋಟಿಸ್ ನೀಡಿದ್ದಾರೆ.

ಬಾಲಕಿಯೂ ಕೇವಲ 16 ವರ್ಷದವಳಾಗಿದ್ದು ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ನಗರ ಸಿಸಿಬಿ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದಾರೆ. ಸಹಾಯಕ ಪೊಲೀಸ್ ಆಯುಕ್ತ ಸಿ.ಗೋಪಾಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು ಇನ್‍ಸ್ಪೆಕ್ಟರ್ ವೈ.ಪಿ.ಚಂದ್ರಕಲಾ, ಸಬ್‍ ಇನ್‍ಸ್ಪೆಕ್ಟರ್ ಎಚ್. ರಮೇಶ್, ಮಹಿಳಾ ಎಎಸ್‍ಐ ಶೀಲಾ ಸಿಬ್ಬಂದಿಯಾದ ರವಿ, ಜೀವನ್, ರಾಧೇಶ್, ಮಹಿಳಾ ಸಿಬ್ಬಂದಿ ಸಹನ ಮಾರ್ಗರೇಟ್ ಹಾಗೂ ವಾಹನ ಚಾಲಕ ಮಂಜುನಾಥ ಪಾಲ್ಗೊಂಡಿದ್ದರು. ಪೊಲೀಸರ ಸಮಯೋಚಿತ ಕಾರ್ಯಚರಣೆಗೆ ಮೈಸೂರು ಪೊಲೀಸ್ ಆಯುಕ್ತ ಡಾ.ಎ.ಸುಬ್ರಮಣ್ಯೇಶ್ವರರಾವ್ ಅವರು ಪ್ರಶಂಸಿದ್ದಾರೆ.

Leave a Reply

comments

Related Articles

error: