ಕರ್ನಾಟಕಪ್ರಮುಖ ಸುದ್ದಿ

ಎರಡೂ ಪಕ್ಷದವರು ಶಾಂತಿ ಕದಡಲು ಮುಂದಾಗಿದ್ದಾರೆ : ರಾಷ್ಟ್ರೀಯ ಪಕ್ಷಗಳ ವಿರುದ್ದ ಕಿಡಿಕಾರಿದ ಹೆಚ್.ಡಿ.ಕೆ

ರಾಜ್ಯ(ಬೆಂಗಳೂರು)ಡಿ.5:-  ಅಮಿತ್ ಶಾ ಅವರ ಸೂಚನೆ ಮೇರೆಗೆ  ಹುಣಸೂರಿನಲ್ಲಿ ಬಿಜೆಪಿಯವರು ಈರೀತಿ ಗಲಾಟೆ ಮಾಡಿದ್ದಾರೆ. ಈ ಬಗ್ಗೆ ಪ್ರತಾಪ್ ಸಿಂಹ  ಅವರೇ ಹೇಳಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಈ ಹೇಳಿಕೆ ಆಧರಿಸಿ ಇಬ್ಬರು ಮೇಲೂ ಕೇಸ್ ಹಾಕಲಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ನಿನ್ನೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಬಿಜೆಪಿಯವರು ಸಮಾಜ ಒಡೆಯಲು ಮುಂದಾಗಿದ್ದಾರೆ.  ಬಿಜೆಪಿಯವರು ಅಲ್ಪಸಂಖ್ಯಾತ ವಿರೋಧಿಗಳು  ಎಂದು ಹೇಳುತ್ತಾರೆ. ಎರಡೂ ಪಕ್ಷದವರು ಶಾಂತಿ ಕದಡಲು ಮುಂದಾಗಿದ್ದಾರೆ. ಒಬ್ಬರು  ಬೆಂಕಿ ಹಚ್ಚುತ್ತಾರೆ. ಮತ್ತೊಬ್ಬರು ಸೀಮೆಎಣ್ಣೆ ಸುರಿಯುತ್ತಿದ್ದಾರೆ ಎಂದು ರಾಷ್ಟ್ರೀಯ ಪಕ್ಷಗಳ ವಿರುದ್ದ ಕಿಡಿಕಾರಿದರು.

ಆರ್.ಆರ್  ನಗರ ಕ್ಷೇತ್ರದಿಂದ ಪ್ರಜ್ವಲ್  ಸ್ಪರ್ಧೆ ಇಲ್ಲ

ಇದೇ ವೇಳೆ ಪ್ರಜ್ವಲ್ ರೇವಣ್ಣ ಸ್ಪರ್ಧೆ ಬಗ್ಗೆ ಸ್ಪಷ್ಟನೆ ನೀಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಅವರ ಸ್ಪರ್ಧೆಗೆ ಯಾರೇ ಆಗ್ರಹಿಸಿದರೂ  ಟಿಕೆಟ್ ನೀಡಲ್ಲ.  ರಾಜರಾಜೇಶ್ವರಿ ನಗರದಿಂದ ಹನುಮಂತರಾಯಪ್ಪ(ದಿ., ಡಿ.ಕೆ ರವಿ ಮಾವ) ಅವರಿಗೆ ಅಥವಾ ಆರ್.ಪ್ರಕಾಶ್ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: