ಕ್ರೀಡೆಮೈಸೂರು

ಶತಕ ವಂಚಿತ ಸೂರ್ಯಕುಮಾರ್

ಮೈಸೂರಿನ ಗಂಗೋತ್ರಿಯ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಪಿ ಕ್ರಿಕೆಟ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ತಂಡದವರು ಉತ್ತರಪ್ರದೇಶ ಎದುರು ಅಲ್ಪ ಮೊತ್ತಕ್ಕೆ ಅಲೌಟ್ ಆದರಲ್ಲದೇ, ಸೂರ್ಯಕುಮಾರ್ ಯಾದವ್ ಒಂದು ರನ್ ನಿಂದ ಶತಕ ವಂಚಿತರಾದರು.

ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ತಂಡ 55ರನ್ ಪಡೆಯುವಷ್ಟರಲ್ಲಿ 3 ವಿಕೆಟ್ ನಷ್ಟಗೊಂಡಿತ್ತು. ಶ್ರೇಯಸ್ ಅಯ್ಯರ್ 35ರನ್ ಗಳನ್ನು 39 ಎಸೆತಗಳಲ್ಲಿ ಪಡೆದುಕೊಂಡರು.

ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ಸೂರ್ಯಕುಮಾರ್ ಯಾದವ್ ತಾಳ್ಮೆಯ ಆಟವಾಡಿ ಕೇವಲ ಒಂದು ರನ್ ನಿಂದ ಶತಕ ವಂಚಿತರಾದರು. 17 ಬೌಂಡರಿ ಗಳಿಸಿದರು. ಆದಿತ್ಯ ಧುಮಾಲ್ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರಾದರೂ ಕೇವಲ 34ರನ್ ಕಲೆ ಹಾಕಿದರು.

ಉತ್ತರಪ್ರದೇಶ ತಂಡದ ಸೌರಭ್ ಕುಮಾರ್ ಹಾಗೂ ಕುಲದೀಪ್ ಯಾದವ್ ಬೌಲಿಂಗ್ ದಾಳಿಗೆ ಮುಂಬೈ ತಂಡ ತತ್ತರಿಸಿತು. ಪ್ರಥಮ ಇನ್ನಿಂಗ್ಸ್ ಆರಂಭಿಸಿದ ಉತ್ತರಪ್ರದೇಶ ತಂಡ ಮೊದಲ ದಿನದಾಟದ ಅಂತ್ಯಕ್ಕೆ 12ಓವರ್ ಗಳಲ್ಲಿ 1ವಿಕೆಟ್ ನಷ್ಟಕ್ಕೆ 22ರನ್ ಗಳಿಸಿದರು.

Leave a Reply

comments

Related Articles

error: