ಮೈಸೂರು

ದ್ವಿಚಕ್ರವಾಹನ ಗಳ ನಡುವೆ ಡಿಕ್ಕಿ : ಸವಾರ ಸಾವು

ಮೈಸೂರು,ಡಿ.5:- ದ್ವಿಚಕ್ರವಾಹನ ಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸವಾರನೋರ್ವ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೃತನನ್ನು ಜೆ.ಪಿ.ನಗರ ನಿವಾಸಿ ಸಿದ್ದೇಶ್ ಎಂದು ಗುರುತಿಸಲಾಗಿದ್ದು, ಈತ ಪೇಂಟರ್ ಕೆಲಸ ಮಾಡಿಕೊಂಡಿದ್ದ. ಮೈಸೂರು-ಹೆಗ್ಗಡದೇವನಕೋಟೆಯ ಮುಖ್ಯರಸ್ತೆಯ ಡಾನ್ ಬಾಸ್ಕೋ ಬಳಿ ಎರಡು ದ್ವಿಚಕ್ರವಾಹನಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ ದುರ್ಘಟನೆ ನಡೆದಿದೆ. ಮೈಸೂರು ಕಡೆ ಬರುತ್ತಿದ್ದಾಗ ಎದುರಿನಿಂದ ಬಂದ ದ್ವಿಚಕ್ರವಾಹನ ಗುದ್ದಿದ ಪರಿಣಾಮ ಅಪಘಾತ ಸಂಭವಿಸಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: