ದೇಶಪ್ರಮುಖ ಸುದ್ದಿ

ಕಪ್ಪುಹಣ, ಭ್ರಷ್ಟಾಚಾರದ ವಿರುದ್ಧ ನಮ್ಮ ಸಮರ ನಿಲ್ಲದು: ಮೋದಿ

500 ಮತ್ತು 1000 ರು. ನೋಟು ರದ್ದಾಗಿರುವುದನ್ನು ಜನ ಮುಂದಿನ 50 ದಿನಗಳವರೆಗೆ ಸಹಿಸಿಕೊಳ್ಳಬೇಕು. ನಿಮ್ಮ ಕನಸಿನ ಭಾರತ ನಿರ್ಮಿಸಲು ಈ ಕ್ರಮ ಕೈಗೊಳ್ಳಲಾಗಿದೆ. ನೋಟು ನಿಷೇಧದಿಂದ ಆಗಿರುವ ನೋವನ್ನು ತಡೆದುಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನರ ಬಳಿ ಮನವಿ ಮಾಡಿಕೊಂಡಿದ್ದಾರೆ.

ಜಪಾನ್ ಪ್ರವಾಸದಿಂದ ತವರಿಗೆ ಮರಳಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರಂದು ಗೋವಾ ಬಳಿ ಮೋಪಾ ಗ್ರೀನ್‍ಫೀಲ್ಡ್ ಏರ್‍ಪೋರ್ಟ್‍ಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಭ್ರಷ್ಟಾಚಾರ, ಕಪ್ಪುಹಣದ ಪಿಡುಗನ್ನು ಮೂಲೋತ್ಪಾದನೆ ಮಾಡುವ ನಿಟ್ಟಿನಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲು ಚಿಂತನೆ ನಡೆಸುತ್ತಿದ್ದೇವೆ. ಬೇನಾಮಿ ಆಸ್ತಿಗಳ ಮೇಲೂ ಕ್ರಮ ಕೈಗೊಳ್ಳಲು ಚಿಂತನೆ ನಡೆಸುತ್ತಿದ್ದು, ಹಂತಹಂತವಾಗಿ ಜಾರಿಗೆ ತರುತ್ತೇವೆ ಎಂದು ಕಾಳಧನಿಕರಿಗೆ ಎಚ್ಚರಿಕೆ ನೀಡಿದರು.

ಕಪ್ಪುಹಣದ ಹಾವಳಿ ತಡೆಗಟ್ಟಲು ಹಾಗೂ ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಿಸುವುದಾಗಿ ಬಿಜೆಪಿ ನೀಡಿದ್ದ ಭರವಸೆಗೆ ಜನ ಅಭೂತಪೂರ್ವ ಬೆಂಬಲಿ ನೀಡಿ ಅಧಿಕಾರಕ್ಕೇರಿಸಿದರು. ಜನರಿಗೆ ಕೊಟ್ಟ ಆಶ್ವಾಸನೆ ಈಡೇರಿಸುವುದು ನಮ್ಮ ಕರ್ತವ್ಯ. 500, 1000 ರು. ನೋಟುಗಳನ್ನು ನಿಷೇಧಿಸಿ, ಹೊಸ ನೋಟುಗಳನ್ನು ಜಾರಿಗೆ ತಂದಿದ್ದೇವೆ. ನಮ್ಮ ಸಮರ ಇಲ್ಲಿಗೆ ನಿಲ್ಲಲ್ಲ. ಇನ್ನೂ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದರು.

ನಮ್ಮ ಸರಕಾರದ ಕ್ರಮಗಳು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಕೆಲ ಶಕ್ತಿಗಳು ನನ್ನ ವಿರುದ್ಧವಾಗಿ ನಿಂತಿದೆ. ಕಳೆದ 70 ವರ್ಷಗಳಿಂದ ದೇಶವನ್ನು ಲೂಟಿ ಹೊಡೆದಿರುವ ಸಂಪತ್ತು ಹೀಗೆ ಕರಗಿ ಹೋಗುತ್ತಿದೆಯಲ್ಲಾ ಎಂಬ ಆತಂಕದಿಂದಲೇ ವಿರೋಧಿಗಳು ನನ್ನನ್ನು ಮಣಿಸಲು ಯೋಜನೆ ರೂಪಿಸುತ್ತಿದ್ದಾರೆ. ದೇಶದ ಒಳೀತೆಗೆ ಎಂತಹ ಕಠಿಣ ಸವಾಲು ಎದುರಿಸಲು ನಾನು ಸಿದ್ಧ ಎಂದು ಹೇಳಿದರು.

Leave a Reply

comments

Related Articles

error: