ಕ್ರೀಡೆಮೈಸೂರು

ವಾಲಿಬಾಲ್ : ಭಾರತಕ್ಕೆ ಸರಣಿ ಗೆಲುವು

ಭಾರತೀಯ ಪ್ಯಾರಾಲಂಪಿಕ್ ವಾಲಿಬಾಲ್ ಫೆಡರೇಷನ್ ಆಶ್ರಯದಲ್ಲಿ ನಡೆದ ಅಂಗವಿಕಲರ ವಾಲಿಬಾಲ್ ಸರಣಿಯನ್ನು ಭಾರತೀಯ ತಂಡ 2-0ರಲ್ಲಿ ಗೆದ್ದುಕೊಂಡಿದೆ.

ಮೈಸೂರಿನ ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭಾರತ ತಂಡದವರು 25-16, 25-17, 25-16ರಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ್ದಾರೆ.

ಆತಿಥೇಯ ತಂಡದವರು ಮೂರೂ ಸೆಟ್ ಗಳಲ್ಲಿ ಸೊಗಸಾದ ಪ್ರದರ್ಶನ ನೀಡಿದ್ದು, ಬಲಿಷ್ಠ ಸ್ಕ್ವಾಷ್ ಹಾಗೂ ಬ್ಲಾಕ್ ಗಳ ಮೂಲಕ ಗಮನ ಸೆಳೆದರು. ತಮಿಳುನಾಡಿನ ರಾಜೇಶ್ ಅತ್ಯುತ್ತಮ ಆಟಗಾರ ಗೌರವ ಪಡೆದರೆ, ಲಂಕಾ ತಂಡದ ದಾಸುರೆ ಗಮನ ಸೆಳೆದರು.

ಇದೇ ಮೊದಲ ಬಾರಿ ಆತಿಥೇಯ ತಂಡ ಸರಣಿ ಜಯಿಸುವಲ್ಲಿ ಯಶಸ್ವಿಯಾಗಿದೆ.

Leave a Reply

comments

Related Articles

error: