ಸುದ್ದಿ ಸಂಕ್ಷಿಪ್ತ

ಡಿ.12 : ಮೃಗಾಲಯ ಮತ್ತು ವನ್ಯಪ್ರಾಣಿಗಳು ರಸಪ್ರಶ್ನೆ ಸ್ಪರ್ಧೆ

ಮೈಸೂರು,ಡಿ.5:- ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯವು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಡಿ.12ರಂದು ಬೆಳಿಗ್ಗೆ 11 ಗಂಟೆಗೆ ಮೃಗಾಲಯದ ಆಡಿಟೋರಿಯಂನಲ್ಲಿ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಿದೆ.

ಒಂದು ಪ್ರೌಢಶಾಲೆಯಿಂದ ನಾಲ್ಕು ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದು. ಸ್ಪರ್ಧೆಗೆ ಭಾಗವಹಿಸುವ ವಿದ್ಯಾರ್ಥಿಗಳು ಅವರವರ ಶಾಲೆಗಳ ಮೂಲಕ ಹೆಸರನ್ನು ನೋಂದಾಯಿಸಿಕೊಳ್ಳಲು ಡಿ.11 ಕೊನೆಯ ದಿನವಾಗಿದೆ. ಮೃಗಾಲಯ ಮತ್ತು ವನ್ಯಪ್ರಾಣಿಗಳು ಕುರಿತು ಸ್ಪರ್ಧೆಗೆ ವಿಷಯ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ದೂ.ಸಂ.2440752 ವನ್ನು ಕಚೇರಿ ವೇಳೆ ಸಂಪರ್ಕಿಸಬಹುದು. ಸ್ಪರ್ಧಿಗಳ ಪಟ್ಟಿಯನ್ನು Mysuru Zoo e-mail ID: [email protected] ಇಲ್ಲಿಗೆ ಕಳುಹಿಸಬೇಕೆಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: