ದೇಶ

ನಾನು ಮರುಹುಟ್ಟು ಪಡೆದೆ- ಮುಖ್ಯಮಂತ್ರಿ ಜಯಲಲಿತಾ ಮೊದಲ ನುಡಿ

“ನಾನು ಮರುಹುಟ್ಟು ಪಡೆದಿದ್ದೇನೆ” ಎಂದವರು ತಮಿಳಿಗರ ಅಮ್ಮ ಹಾಗೂ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ.

ಅವರು ಕಳೆದ 50 ದಿನಗಳಿಂದ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ತೀವ್ರಾ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಮಿಳುನಾಡು ಸೇರದಿಂತೆ ದೇಶ ವಿದೇಶಗಳಲ್ಲಿರುವ ಅಮ್ಮನ ಅಭಿಮಾನಿಗಳು ನಿರಂತರ ಪ್ರಾರ್ಥನೆಯು ಫಲಿಸಿದ್ದು ನಾನು ಮರುಹುಟ್ಟು ಪಡೆದಿದ್ದೇನೆ..ನಿಮ್ಮೊಂದಿಗೆ ಈ ಮಾತು ಹಂಚಿಕೊಳ್ಳಲು ಸಂತೋಷವಾಗುತ್ತಿದೆ ಎಂದು ಜಯಲಲಿತಾ ಅವರು ಬರೆದ ಬಹಿರಂಗ ಪತ್ರವನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಬಿಡುಗಡೆಗೊಳಿಸಿದ್ದಾರೆ.

ತಂಜಾವೂರು ಅವರಕುರುಚಿ ಹಾಗೂ ತಿರುಪರಿಕುಂದ್ರಮ್ ಕ್ಷೇತ್ರಗಳಲ್ಲಿ ಮರು ಚುನಾವಣೆ ನಡೆಯುತ್ತಿದ್ದು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಅದಕ್ಕಾಗಿ ಎದುರು ನೋಡುತ್ತಿದ್ದೇನೆ ಎನ್ನುವ ಭಾವನಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಆರೋಗ್ಯದಲ್ಲಿ ಸಂಪೂರ್ಣ ಗುಣಮುಖಳಾಗುತ್ತಿದ್ದು ಸದ್ಯದಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಜನತೆ ಸೇವೆಗೆ  ತೊಡಗಿಕೊಳ್ಳುವೆ. ನಾನು ಆಸ್ಪತ್ರೆ ಸೇರಿದ ಸುದ್ದಿ ತಿಳಿದ ಹಲವರು ಆತ್ಮಹತ್ಯೆ ಮಾಡಿಕೊಂಡಿರುವುದು ಅತೀವ ದುಃಖ ನೀಡಿದೆ ಎಂದು ತಿಳಿಸಿದ್ದಾರೆ.

Leave a Reply

comments

Related Articles

error: