ದೇಶ

ದೇಶಾದ್ಯಂತ 500 ರು. ಹೊಸ ನೋಟು ರವಾನೆ

ನಾಸಿಕ್‍ನ ನೋಟ್ ಪ್ರೆಸ್(ಸಿಎನ್‍ಪಿ)ನಿಂದ 500 ರು. ಮುಖಬೆಲೆಯ ಸುಮಾರು 50 ಲಕ್ಷ ಹೊಸ ನೋಟುಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಕಳುಹಿಸುವ ಪ್ರಕ್ರಿಯೆ ಆರಂಭವಾಗಿದೆ.

ಹೊಸ ನೋಟುಗಳನ್ನು ಮುದ್ರಿಸುತ್ತಿರುವ ನಾಸಿಕ್‍ನ ಕರೆನ್ಸಿ ನೋಟ್ ಪ್ರೆಸ್(ಸಿಎನ್‍ಪಿ) ಮುದ್ರಸಿಸಿ 500 ರು. ನೋಟುಗಳ ಕಂತೆಯನ್ನು ಈಗಾಗಲೇ ದೇಶಾದ್ಯಂತ ಎಲ್ಲ ಬ್ಯಾಂಕ್‍ಗಳಿಗೆ ರವಾನಿಸುತ್ತಿದೆ ಎಂದು ಆರ್ಬಿಐ ಭಾನುವಾರ ಹೇಳಿದೆ.

500 ರು. ಮುಖಬೆಲೆಯ 50 ಲಕ್ಷ ನೋಟುಗಳ ಎರಡನೇ ಕಂತನ್ನು ಸಿಎನ್‍ಪಿ ಬುಧವಾರದೊಳಗೆ ಆರ್‍ಬಿಐಗೆ ಕಳುಹಿಸಲಿದೆ.

ಕಳೆದ ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಯಾಗುವಂತೆ ಕೇಂದ್ರ ಸರಕಾರವು 500 ಮತ್ತು 1000 ರು. ನೋಟುಗಳನ್ನು ನಿಷೇಧಿಸಿ 500 ಮತ್ತು 2000 ಮುಖಬೆಲೆಯ ಹೊಸ ನೋಟುಗಳನ್ನು ಪರಿಚಯಿಸಿದೆ. 2000 ರು. ಹೊಸ ನೋಟುಗಳು ಈಗಾಗಲೇ ಚಲಾವಣೆಯಲ್ಲಿದ್ದು, 500 ರು. ಮುಖಬೆಲೆಯ ನೋಟು ಇನ್ನಷ್ಟೇ ಲಭ್ಯವಾಗಲಿದೆ.

Leave a Reply

comments

Related Articles

error: