ಮೈಸೂರು

ನಿಯಮಿತ ಆಹಾರ ಸೇವಿಸಿ ಮಧುಮೇಹ ತಡೆಯಿರಿ : ಸುಬ್ರಹ್ಮಣ್ಯೇಶ್ವರರಾವ್ ಸಲಹೆ

ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ಮೈಸೂರಿನ ಭಾನವಿ ಆಸ್ಪತ್ರೆ ವತಿಯಿಂದ ಸೋಮವಾರ ಬೆಳಿಗ್ಗೆ 7ಗಂಟೆಗೆ ಕುವೆಂಪುನಗರದ ಮುಖ್ಯರಸ್ತೆಗಳಲ್ಲಿ ವಾಕ್ ಥಾನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕುವೆಂಪುನಗರದಲ್ಲಿರುವ ಭಾನವಿ ಆಸ್ಪತ್ರೆಯ ಆವರಣದಿಂದ ವಾಕ್ ಥಾನ್ ಗೆ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ಮಧುಮೇಹ ವಯಸ್ಸಿನ ಭೇದವಿಲ್ಲದೇ ಬರುತ್ತಿದೆ. ನಿಯಮಿತ ವ್ಯಾಯಾಮ ಹಾಗೂ ಆಹಾರ ನಿಯಂತ್ರಣಗಳಿಂದ ಮಧುಮೇಹವನ್ನು ಬರದಂತೆ ತಡೆಯಬಹುದು ಎಂದು ಸಲಹೆ ನೀಡಿದರು. ಮಧುಮೇಹವಿದೆ ಎಂದು ತಿಳಿದ ಕೂಡಲೇ ವೈದ್ಯರನ್ನು ಸಂಪರ್ಕಸಿ ಅವರಿಂದ ಸಲಹೆ ಪಡೆಯುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳಬಹುದು. ಗಾಬರಿ ಪಡುವ ಅಗತ್ಯವಿಲ್ಲ ಎಂದರು.

ಈ ಸಂದರ್ಭ ಮಹಾನಗರಪಾಲಿಕೆ ಆಯುಕ್ತ ಜಿ.ಜಗದೀಶ್, ಮೈಸೂರು ಅಸೋಸಿಯೇಶನ್ ಆಫ್ ಹಾಸ್ಪಿಟಲ್, ನರ್ಸಿಂಗ್ ಹೋಮ್ & ಡಯಾಗ್ನಸ್ಟಿಕ್ ಸೆಂಟರ್ ನ ಅಧ್ಯಕ್ಷ ಡಾ.ಮಹೇಶ್ ಕುಮಾರ್ ಆರ್, ಭಾನವಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ವಿಜಯ್ ಚೆಲುವರಾಜ್ ಎಸ್. ಸಂಸ್ಥಾಪಕ ಸಿ.ನರಸೇಗೌಡ, ವ್ಯವಸ್ಥಾಪಕ ಪ್ರಶಾಂತ್ ಆರ್. ಮತ್ತಿತರರು ಉಪಸ್ಥಿತರಿದ್ದರು.

ವಾಕ್ ಥಾನ್ ಅಕ್ಷಯಭಂಡಾರ ಮೂಲಕ ಆದಿಚುಂಚನಗಿರಿ ರಸ್ತೆಯಲ್ಲಿ ಸಾಗಿ ಅಗರ್ವಾಲ್ ಆಸ್ಪತ್ರೆಯ ಸಿಗ್ನಲ್ ತಲುಪಿ ನಂತರ ಬಲಕ್ಕೆ ತಿರುಗಿ ಪ್ರೇರಣಾ ಆಸ್ಪತ್ರೆ ರಸ್ತೆಯಲ್ಲಿ ಸಾಗಿ ನವಿಲು ರಸ್ತೆಯ ಮೂಲಕ ಭಾನವಿ ಆಸ್ಪತ್ರೆಯನ್ನು ತಲುಪಿತು. ನೂರಾರು ಮಂದಿ ವಾಕ್ ಥಾನ್ ನಲ್ಲಿ ಪಾಲ್ಗೊಂಡಿದ್ದರು.

ಆಸ್ಪತ್ರೆಯಲ್ಲಿ ಮಧುಮೇಹ ದಿನದಂಗವಾಗಿ ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದ್ದು, ಡಯಾಬಿಟೀಸ್ ವೈದ್ಯರಿಂದ ತಪಾಸಣೆ ಮತ್ತು ಸಲಹೆ, ನೇತ್ರ ವೈದ್ಯರಿಂದ ತಪಾಸಣೆ, ಆಹಾರ ಹಾಗೂ ವ್ಯಾಯಾಮಗಳ ವಿಧಿ ವಿಧಾನಗಳ ಬಗ್ಗೆ ಸಲಹೆ, ಕ್ಯಾಪಿಲರಿ ಬ್ಲಡ್ ಗ್ಲುಕೋಸ್ ಪರೀಕ್ಷೆ, ರಕ್ತದ ಕೊಲೆಸ್ಟ್ರಾಲ್ ಪರೀಕ್ಷೆ, ಹೆಚ್.ಬಿ.ಎ1ಸಿ, ಇ.ಸಿ.ಜಿ, ಇಕೋ ಕಾರ್ಡಿಯೋಗ್ರಾಫಿ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುತ್ತಿದೆ.

Leave a Reply

comments

Related Articles

error: