ಸುದ್ದಿ ಸಂಕ್ಷಿಪ್ತ

ಡಿ 7 : ವಿಚಾರ ಸಂಕಿರಣ

ಮೈಸೂರು, ಡಿ.6:- ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಡಿಸೆಂಬರ್ 7 ರಂದು ಬೆಳಿಗ್ಗೆ 10.30 ಕ್ಕೆ  ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಹಿರಿಯ ಪತ್ರಕರ್ತ ದಿ.ರಾಜಶೇಖರ ಕೋಟಿ ಅವರ ಸ್ಮರಣಾರ್ಥ ಸಾಮಾಜಿಕ ಜಾಲತಾಣಗಳು ಸಣ್ಣ ಪತ್ರಿಕೆಗಳ ಮೇಲೆ ಉಂಟು ಮಾಡಿರುವ ಪರಿಣಾಮ, ಸವಾಲುಗಳು ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.
ಕನ್ನಡ ಪ್ರಭ ಮತ್ತು ಸುವರ್ಣ ಟಿವಿಯ ಸಂಪಾದಕ ರವಿ ಹೆಗಡೆ ಅವರು ಕಾರ್ಯಕ್ರಮ ಉದ್ಘಟಿಸಲಿದ್ದು, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ. ಸಿದ್ದರಾಜು ಅವರು ಅಧ್ಯಕ್ಷತೆ ವಹಿಸುವರು. ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್ ಬ್ಯೂರೋ ಚೀಫ್ ಕೆ.ಶಿವಕುಮಾರ್, ಸ್ಟಾರ್ ಆಫ್ ಮೈಸೂರು ಸಂಪಾದಕ ಕೆ.ಬಿ. ಗಣಪತಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಆಂದೋಲನ ಪತ್ರಿಕೆಯ ಸಂಪಾದಕ ರವಿ ಕೋಟಿ ಅವರುಗಳು ಭಾಗವಹಿಸಲಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: