ಮೈಸೂರು

ತನ್ವೀರ್ ಸೇಠ್ ರಾಜೀನಾಮೆ ನೀಡಲಿ: ಕರುನಾಡು ಜನಶಕ್ತಿ ವೇದಿಕೆ

ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಮೊಬೈಲಿನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಪ್ರೌಢಶಿಕ್ಷಣ ಸಚಿವರಾದ ತನ್ವೀರ್ ಸೇಠ್‍ ಅವರು ಸಚಿವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಕರುನಾಡು ಜನಶಕ್ತಿ ವೇದಿಕೆಯು ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಇಂಥ ಸಚಿವರಿಂದ ಮಕ್ಕಳ ಮೇಲೆ ನೇರ ದುಷ್ಪರಿಣಾಮಗಳು ಬೀರುತ್ತವೆ. ಸಚಿವರ ನಡವಳಿಕೆಯೇ ಸರಿಯಿಲ್ಲದಿರುವಾಗ ರಾಜ್ಯದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಏನು ಸಂದೇಶ ನೀಡುತ್ತಾರೆ? ಸರಕಾರಿ ಕಾರ್ಯಕ್ರಮದಲ್ಲಿ ಈ ರೀತಿಯ ದುರ್ವರ್ತನೆ ತೋರಿದ ಸಚಿವ ಸೇಠ್ ವಿರುದ್ಧ ರಾಜ್ಯ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಸಂವಿಧಾನಕ್ಕೆ ಧಕ್ಕೆಯಾಗದಂತೆ ಇಂತವರನ್ನು ಗಡಿಪಾರು ಮಾಡಬೇಕೆಂದು ಕರುನಾಡು ಜನಶಕ್ತಿ ಆಗ್ರಹಿಸಿತು.

ಪ್ರತಿಭಟನೆಯಲ್ಲಿ ವೇದಿಕೆ ಪ್ರಧಾನ ಕಾರ್ಯದರ್ಶಿ ಚಂದ್ರು ಕೆ., ಯತಿರಾಜ್, ಪರಮೇಶ್, ರಾಮು, ಗಿರೀಶ್, ರಾಚಪ್ಪ, ಜಿ. ಉಮೇಶ್, ವಸಂತ್ ಕುಮಾರ್, ನಾಗರಾಜ್, ರಾಜೇಂದ್ರ, ಉಮೇಶ್ ಎಸ್‍.ಪಿ. ಮತ್ತು ಇತರರು ಉಪಸ್ಥಿತರಿದ್ದರು

Leave a Reply

comments

Related Articles

error: