ಮೈಸೂರು

ಮೈಸೂರು ಮೃಗಾಲಯದ ಪ್ರಾಣಿ, ಪಕ್ಷಿಗಳ ದತ್ತು ಸ್ವೀಕಾರ

ಶುಲ್ಕ ಭರಿಸಿ ಒಂದು ವರ್ಷದವರಿಗೆ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಲ್ಲಿ ಪ್ರಾಣಿ ಮತ್ತು ಪಕ್ಷಿಗಳನ್ನು ದತ್ತು ಪಡೆದವರ ಹೆಸರಿನ ಪಟ್ಟಿಯನ್ನು ಮೈಸೂರು ಮೃಗಾಲಯ ಘೋಷಿಸಿದೆ.

ಆಂಧ್ರಪ್ರದೇಶದ ಅನಂತಪುರದ ಡಾ. ಲತಾಶ್ರೀ ಸತ್ಯಕುಮಾರ್ ಅವರು 2 ಸಾವಿರ ರು. ಶುಲ್ಕ ಭರಿಸಿ ಭಾರತೀಯ ಕಟ್ಟುಹಾವನ್ನು ದತ್ತು ಸ್ವೀಕರಿಸಿದ್ದಾರೆ. ಬೆಂಗಳೂರಿನ ಎನ್‍.ಕೆ. ಕುಸುಮಾ ಎಂಬವರು 3,500 ರು. ಭರಿಸಿ ಬಿಳಿ ನವಿಲು, ಡೆಹ್ರಾಡೂನಿನ ಗಾರ್ಗಿ ಚೌಧರಿ 2 ಸಾವಿರ ಭರಿಸಿ ನಕ್ಷತ್ರ ಆಮೆ, ಬೆಂಗಳೂರಿನ ಆರ್. ಪ್ರಮೋದ್, ಮೈಸೂರಿನ ಪವಿತ್ರಾ ಪಿ. ಡಾಸ್ ಮತ್ತು ಸುಚಿತ್ರಾ ಪಿ. ಡಾಸ್ ತಲಾ 1 ಸಾವಿರ ಭರಿಸಿ ಒಂದೊಂದು ಲವ್‍ಭರ್ಡ್‍ ಅನ್ನು ದತ್ತು ಸ್ವೀಕರಿಸಿದ್ದಾರೆ.

ಎಸ್‍ಕೆಜೆ ಸ್ಪೋರ್ಟ್ಸ್ ಪ್ರಮೋಷನ್(ಪಿ) ಲಿ. ಬೆಂಗಳೂರು 1,00,000 ರು. ಭರಿಸಿ ಹುಲಿಯೊಂದನ್ನು ದತ್ತು ಪಡೆದಿದೆ. ಪ್ರಾಣಿ ಮತ್ತು ಪಕ್ಷಿ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಮುಂದೆ ಬಂದು ದತ್ತು ಸ್ವೀಕರಿಸಿದವರೆಲ್ಲರಿಗೂ ಮೈಸೂರು ಮೃಗಾಲಯ ಪ್ರಾಧಿಕಾರ ಧನ್ಯವಾದ ಸಲ್ಲಿಸಿದೆ.

Leave a Reply

comments

Related Articles

error: