ದೇಶಪ್ರಮುಖ ಸುದ್ದಿ

ಉಗ್ರ ಹಫೀಜ್ ಜೊತೆ ರಾಜಕೀಯ ಮೈತ್ರಿ ಮಾಡಿಕೊಳ್ಳುವೆ ಎಂದ ಖದೀಮ ಜ.ಮುಷರ್ರಫ್

ಇಸ್ಲಾಮಾಬಾದ್ (ಡಿ.6): ಪಾಕಿಸ್ತಾನದ ಮುಂದಿನ ಚುನಾವಣೆಯಲ್ಲಿ ಹಫೀಜ್ ಸಯೀದ್ ನೇತೃತ್ವದ ಜಮಾತ್-ಉದ್-ದವಾ(ಜೆಯುಡಿ) ಬಣದೊಂದಿಗೆ ರಾಜಕೀಯ ಮೈತ್ರಿ ಮಾಡಿಕೊಳ್ಳುವೆ ಎಂದು ಪಾಕಿಸ್ತಾನದ ಕುಖ್ಯಾತ ಮಿಲಿಟರಿ ಸರ್ವಾಧಿಕಾರಿ ಜನರಲ್ ಪರ್ವೇಜ್ ಮುಷರಫ್ ಹೇಳಿದ್ದಾನೆ.

ಇತ್ತೀಚೆಗೆಗಷ್ಟೇ ಲಷ್ಕರ್-ಇ-ತೈಬಾ ಉಗ್ರಗಾಮಿ ಸಂಘಟನೆಗೆ ನಾನು ದೊಡ್ಡ ಬೆಂಬಲಿಗ, ಆ ಸಂಘಟನೆಗೂ ನಾನೆಂದರೆ ಬಹಳ ಪ್ರೀತಿ ಎಂದು ಹೇಳಿಕೊಂಡಿದ್ದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್, ಇದೀಗ ಮುಂಬೈ ಭಯೋತ್ಪಾದಕ ದಾಳಿ ಸೂತ್ರಧಾರ ಉಗ್ರಗಾಮಿ ಹಫೀಸ್ ಸಯೀದ್‍ನೊಂದಿಗೆ ರಾಜಕೀಯ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಪಾಕಿಸ್ತಾನದ ಮುಂದಿನ ಮಹಾ ಚುನಾವಣೆಯಲ್ಲಿ ನಿಷೇಧಿತ ಭಯೋತ್ಪಾದನೆ ಸಂಘಟನೆ ಜೆಯುಡಿ ಮತ್ತು ಅದರ ಮುಖ್ಯಸ್ಥ ಹಫೀಜ್ ಜೊತೆ ರಾಜಕೀಯ ಮೈತ್ರಿಗೆ ತಾನು ಮುಕ್ತ ಮನಸ್ಸು ಹೊಂದಿರುವುದಾಗಿ ಮಾಜಿ ಸರ್ವಾಧಿಕಾರಿ ಮುಷರ್ರಫ್ ಆಜ್ ನ್ಯೂಸ್‍ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿಕೊಂಡಿದ್ದಾನೆ.

ಆದರೆ ಮೈತ್ರಿಯ ಕುರಿತಾಗಿ ಈವರೆಗೂ ಯಾವುದೇ ಮಾತುಕತೆ ನಡೆದಿಲ್ಲ. ಮೈತ್ರಿಗೆ ಹಫೀಜ್ ಮತ್ತು ಅವರ ಸಂಘಟನೆ ಬಯಸುವುದಾದರೆ ನಾನು ಅದನ್ನು ಸರ್ವ ರೀತಿಯಲ್ಲಿಯೂ ಸ್ವಾಗತಿಸುತ್ತೇನೆ ಎಂದು ಯಾವುದೇ ಅಂಜಿಕೆಯಿಲ್ಲದೆ ಮುಷರ್ರಫ್ ಗಂಟಾಘೋಷವಾಗಿ ತಿಳಿಸಿದ್ದಾನೆ.

1999ರ ಕಾರ್ಗಿಲ್ ಕದನವನ್ನು ತಾನೇ ಆಯೋಜಿಸಿದ್ದು ಎಂದು ಈತನೇ ಒಪ್ಪಿಕೊಂಡಿದ್ದಾನೆ. ಕಾರ್ಗಿಲ್‍ ಸಾಹಸದ ಬಗ್ಗೆ ಕೊಚ್ಚಿಕೊಂಡಿದ್ದ ಮುಷರಫ್, ಕಾರ್ಗಿಲ್‍ನಲ್ಲಿ ಪಾಕಿಸ್ತಾನ ನಿಜವಾದ ವಿಜಯ ಸಾಧಿಸಿತು ಎಂದು ಪಾಕಿಸ್ತಾನದ ಜನತೆಯ ಮುಂದೆ ಸುಳ್ಳೇ ಸುಳ್ಳು ವಾದ ಮಂಡಿಸಿ ಪ್ರಚಾರ ಗಿಟ್ಟಿಸಿಕೊಂಡಿದ್ದ.

ಮುಷರ್ರಫ್ ಇತ್ತೀಚೆಗೆ 23 ಪಕ್ಷಗಳ ನೂತನ ಮಹಾ ಮೈತ್ರಿಕೂಟವೊಂದನ್ನು ರಚಿಸಿಕೊಂಡಿದ್ದು. ಇದೀಗ ನಿಷೇಧಿತ ಜಮಾತ್‍-ಉದ್‍-ದಾವಾ ಸಂಘಟನೆಯ ಹಫೀಸ್‍ ಸಯೀದ್‍ನನ್ನು ತನ್ನ ಮೈತ್ರಿಕೂಟದಲ್ಲಿ ಸೇರಿಸಿಕೊಳ್ಳಲು ಬಯಸಿರುವುದಾಗಿ ತಿಳಿಸಿದ್ದಾನೆ. ಒಟ್ಟಾರೆ ಮುಷರಫ್ ಭಾರತ ವಿರೋಧಿ ನಿಲುವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಿರುವುದು ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸಂಬಂಧ ಸುಧಾರಣೆಯ ದೃಷ್ಟಿಯಿಂದ ದುರದೃಷ್ಟಕರ ಎಂದೇ ಹೇಳಬಹುದು.

(ಎನ್‍ಬಿಎನ್‍)

Leave a Reply

comments

Related Articles

error: