ಮೈಸೂರು

ಸಹಕಾರಿ ಮಾದರಿ ಜನಪ್ರಿಯಗೊಳಿಸದಿದ್ದಲ್ಲಿ ಆರ್ಥಿಕ ಸಮತೋಲನ ಸಾಧ್ಯವಿಲ್ಲ : ಕೆ.ಎಂ.ನಾಗರಾಜು

ಸಹಕಾರ ಮಾದರಿಯಲ್ಲಿ ಸಾಕಷ್ಟು ಸಾಮರ್ಥ್ಯವಿದ್ದರೂ ಸಹ ಅದು ಹೆಚ್ಚು ಹೆಚ್ಚು ಪ್ರಖ್ಯಾತಿಯನ್ನು ಹೊಂದಿಲ್ಲ. ಸಾಮಾನ್ಯ ಜನರಲ್ಲಿ ಸಹಕಾರ ಕ್ಷೇತ್ರದ ಬಗ್ಗೆ ಸರಿಯಾದ ತಿಳುವಳಿಕೆ ಉಂಟುಮಾಡುವಲ್ಲಿ ವೈಫಲ್ಯತೆ ಕಂಡಿದೆ. ಎಲ್ಲಿಯವರೆಗೆ ಸಹಕಾರಿ ಮಾದರಿಯನ್ನು ಜನಪ್ರಿಯಗೊಳಿಸುವುದಿಲ್ಲವೋ ಅಲ್ಲಿಯವರೆಗೆ ಸಾಮಾಜಿಕ ಆರ್ಥಿಕ ಸಮತೋಲನ ಸಾಧ್ಯವಿಲ್ಲ ಎಂದು ಸಹಕಾರ ಸಂಸ್ಥೆಯ ಮಾಜಿ ಸಹಾಯಕ ನಿರ್ದೇಶಕ ಕೆ.ಎಂ.ನಾಗರಾಜು ಹೇಳಿದರು.

ಮೈಸೂರಿನ ಸಹಕಾರ ಭವನದಲ್ಲಿ 63ನೇ ಅಖಿಲಭಾರತ ಸಹಕಾರ ಸಪ್ತಾಹಕ್ಕೆ ಚಾಲನೆ ನೀಡಿದ ಬಳಿಕ  ಕೆ.ಎಂ.ನಾಗರಾಜು ವಿಶೇಷ ಉಪನ್ಯಾಸ ನೀಡಿದರು. ಬಳಿಕ ಮಾತನಾಡಿದ ಅವರು ಹಲವಾರು ಸಹಕಾರಿ ಸಂಘಗಳು ಯಶಸ್ಸನ್ನು ಸಾಧಿಸಿವೆ. ಸಣ್ಣ ಸಹಕಾರಿ ಸಂಘಗಳ ಮೂಲಕವೇ ಕಲಿತು ಯಶಸ್ಸು ಸಾಧಿಸಿದ ಪುರಾವೆಗಳಿವೆ ಎಂದರು.

ಸಪ್ತಾಹದ ಅವಧಿಯಲ್ಲಿ ಸಹಕಾರ ಕ್ಷೇತ್ರದ ವಿವಿಧ ಸಾಧನೆ, ವೈಫಲ್ಯಗಳ ಕುರಿತು ಚಿಂತನೆ, ವಿಮರ್ಶೆ ನಡೆಯಬೇಕು. 2017ನೇ ವರ್ಷಕ್ಕೆ ಹೊಸ ಯೋಜನೆಗಳ ಅನುಷ್ಠಾನಕ್ಕೆ ಸಿದ್ಧತೆಯ ಸಂಕಲ್ಪವಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಹೆಚ್.ವಿ.ರಾಜೀವ್, ಸಹಕಾರ ಸಂಘಗಳ ಉಪನಿಬಂಧಕ ಡಾ.ಉಮೇಶ್ ಜಿ, ರಾಜ್ಯ ಮೀನುಗಾರಿಕೆ ಸಹಕಾರ ಮಂಡಳದ ಅಧ್ಯಕ್ಷ ಎಸ್.ಮಾದೇಗೌಡ, ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳದ ಎಂ.ಕೃಷ್ಣಯ್ಯ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: