ಮೈಸೂರು

‘ಮಾನವೀಯತೆ ಉಳಿಯಲಿ ಕೋಮುವಾದ ಅಳಿಯಲಿ’ : ಡಿ.7ಕ್ಕೆ ದುಂಡು ಮೇಜಿನ ಸಭೆ

ಮೈಸೂರು, ಡಿ.6 : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ದಲಿತ ಸಂಘರ್ಷ ಸಮಿತಿ, ಸಿ.ಪಿ.ಎಂ(ಐ) ರಾಜ್ಯ ರೈತ ಸಂಘ, ಪ್ರಗತಿಪರ ಸಂಘಟನೆಗಳ ಒಕ್ಕೂಟಗಳಿಂದ ‘ಸೌಹಾರ್ಧತೆ ಬೆಳೆಯಲಿ, ಮಾನವೀಯತೆ ಉಳಿಯಲಿ, ಕೋಮುವಾದ ಅಳಿಯಲಿ’ ಕುರಿತ ದುಂಡು ಮೇಜಿನ ಸಭೆಯನ್ನು ಆಯೋಜಿಸಿದೆ ಎಂದು ಸಿಪಿಐ ಎಂ ಜಿಲ್ಲಾ ಕಾರ್ಯದರ್ಶಿ ಕೆ.ಬಸವರಾಜು ತಿಳಿಸಿದರು.

ಹುಣಸೂರು, ಚಿಕ್ಕಮಗಳೂರು ದೊಂಭಿ, ಸಂಸದರ ಗೂಂಡಾವರ್ತನೆ, ಉಡುಪಿಯ ಧರ್ಮ ಸಂಸತ್ ಆತಂಕಕಾರಿ  ಬೆಳವಣಿಗೆಯಿಂದ ಸಮಾಜದಲ್ಲಿ ಪ್ರಕ್ಷುಬ್ಧ ವಾತಾವರಣ ಏರ್ಪಟ್ಟಿದ್ದು, ಸಮಾಜದ ಸೌಹಾರ್ಧ ಸಾಮರಸ್ಯಕ್ಕೆ ಧಕ್ಕೆ ಉಂಟಾಗಿದೆ. ಈ ಬಗ್ಗೆ ಜನ ಜಾಗೃತಿ ಮೂಡಿಸಲು ದುಂಡು ಮೇಜಿನ ಸಭೆಯನ್ನು ಡಿ.7ರ ಸಂಜೆ 5 ಗಂಟೆಗೆ, ನಜರ್ ಬಾದ್ ಬಳಿಯಲ್ಲಿರುವ ಹೋಟೆಲ್ ಸಿದ್ಧಾರ್ಥದಲ್ಲಿ ಆಯೋಜಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಭೆಯಲ್ಲಿ ಪ್ರೊ.ಕಾಳೇಗೌಡ ನಾಗವಾರ, ಪ್ರೊಹಿ.ಶಿ.ರಾಮಚಂದ್ರೇಗೌಡ, ಪ್ರೊ.ಮುಝಾಫರ್ ಅಸ್ಸಾದಿ, ಪ್ರೊ.ಮಹೇಶ್ಚಂದ್ರಗುರು, ಪ್ರೊ.ದಯಾನಂದ ಮಾನೆ, ಪ್ರೊ.ಎನ್.ಎಸ್.ರವಿರಾಜ್, ರಂಗಾಯಣದ ನಿಕಟಪೂರ್ವ ಅಧ್ಯಕ್ಷ ಜನಾರ್ಧನ್, ಡಾ.ರತಿರಾವ್, ಮೀರಾನಾಯಕ್, ಪ್ರೊ.ನಂಜುಂಡಯ್ಯ, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಡಾ.ಚಿಕ್ಕಮಗಳೂರು ಗಣೇಶ್, ಡಾ.ಪ್ರಭು ಬಿಸಲಹಳ್ಳಿ, ಮಾನ, ಆರ್. ಮಹದೇವಪ್ಪ, ಪ್ರೊ.ಕುಮಾರಸ್ವಾಮಿ, ಡಾ.ರಾಮಸ್ವಾಮಿ, ಪಿ.ಶಂಭಯ್ಯ, ರೈತ ಸಂಘದ ಹೊಸಕೋಟೆ ಬಸವರಾಜು ಹಾಗೂ ಪ್ರಗತಿಪರ ಚಿಂತಕರು, ವಿವಿಧ ಸಂಘಟನೆಯ ಮುಖಂಡರಗಳು ಸಭೆಯಲ್ಲಿ ಪಾಲ್ಗೊಳ್ಳುವರು ಎಂದು ಹೇಳಿದರು.

ಗೋಷ್ಠಿಯಲ್ಲಿ ಕ.ರಾ.ಹಿಂ.ವ.ಜಾ.ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು, ಪತ್ರಿಕಾ ಕಾರ್ಯದರ್ಶಿ ಜಾಕೀರ್ ಹುಸೇನ್, ರಾಜ್ಯ ರೈತ ಸಂಘದ ತಾಲ್ಲೂಕಾಧ್ಯಕ್ಷ ಮರಂಕಯ್ಯ,ರಾಜ್ಯ ದ.ಸಂ.ಸ ಸಂಚಾಲಕ ಚುಂಚನಹಳ್ಳಿ ಮಲ್ಲೇಶ್ ಮೊದಲಾದವರು ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: