ಮೈಸೂರು

ಕುಕ್ಕರಹಳ್ಳಿ ಕೆರೆಯಲ್ಲಿ ಕಂಡು ಬಂದ ಪೆಲಿಕಾನ್ : ಚಿಕಿತ್ಸೆ

ಮೈಸೂರು,ಡಿ.6:- ಕುಕ್ಕರಹಳ್ಳಿ ಕೆರೆಯಲ್ಲಿ ಕಂಡು ಬಂದ ಅನಾರೋಗ್ಯಕ್ಕೀಡಾದ ಪೆಲಿಕಾನ್ ಪಕ್ಷಿಯನ್ನು ರಕ್ಷಿಸಿ ಚಿಕಿತ್ಸೆ ನೀಡಲಾಗಿದೆ.

ಬಹಳ ನೀರಿರುವ ಪ್ರದೇಶದಲ್ಲಿ ಕಂಡು ಬರುವ  ಈ ಪೆಲಿಕಾನ್ ಪಕ್ಷಿ ಕುಕ್ಕರಹಳ್ಳಿ ಕೆರೆಯಲ್ಲಿ ಕಂಡು ಬಂದಿದ್ದು, ಅನಾರೋಗ್ಯಕ್ಕೀಡಾಗಿದೆ. ಕಳೆದೆರಡು ದಿನಗಲ್ಲಿ ಇದು ಎರಡನೇ ಪಕ್ಷಿಯಾಗಿದೆ. ಮಂಗಳವಾರ ಸಂತೋಷ್ ಎಂಬವರು ಅನಾರೋಗ್ಯಕ್ಕೀಡಾದ   ಪೆಲಿಕಾನ್ ಪಕ್ಷಿಗೆ ಚಿಕಿತ್ಸೆ ಕೊಡಿಸಿದ್ದರು. ಮಾರನೆಯ ದಿನವೇ ಮತ್ತೊಂದು ಅನಾರೋಗ್ಯಕ್ಕೀಡಾದ ಪಕ್ಷಿ ಕಾಣಸಿಕ್ಕಿದೆ. ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ವಿಭಾಗದ ಸದಸ್ಯ ಕೆ.ಎಂ.ಜಯರಾಮಯ್ಯ ವಿಷಯ ತಿಳಿಯುತ್ತಿದ್ದಂತೆ ಪಶುಪಾಲನಾ ವೈದ್ಯರನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ಸಿಟಿಟುಡೆಯೊಂದಿಗೆ ಮಾತನಾಡಿದ ಕೆ.ಎಂ.ಜಯರಾಮಯ್ಯ ಅನಾರೋಗ್ಯಕ್ಕಿಡಾದ ಪೆಲಿಕಾನ್ ಸಿಕ್ಕಿದೆ ಎಂದು ತಿಳಿಯಿತು. ಕೂಡಲೇ ಕೂಡಲೇ  ಅದರ ಚಿಕಿತ್ಸೆಗೆ ಪಶುಪಾಲನಾ ವಿಭಾಗದ ಉಪನಿರ್ದೇಶಕ ಡಾ.ಪ್ರಸಾದ್ ಮೂರ್ತಿಯವರನ್ನು ಕಳುಹಿಸಲಾಯಿತು.   ಪಕ್ಷಿ ಚೇತರಿಸಿಕೊಳ್ಳಲು ವೈದ್ಯರು ಬಿ.ಕಾಂಪ್ಲೆಕ್ಸ್ ನ್ನು ನೀಡಿದ್ದಾರೆ. ಪಕ್ಷಿ ಬಹುಬೇಗ ಚೇತರಿಸಿಕೊಳ್ಳುತ್ತದೆ ಎಂದು ಆಶಿಸುತ್ತೇನೆ ಎಂದರು. (ಹೆಚ್.ಎನ್,ಎಸ್.ಎಚ್)

Leave a Reply

comments

Related Articles

error: