ಮೈಸೂರು

ಮಮತೆಯ ತೊಟ್ಟಿಲಿಗೆ ಚಾಲನೆ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಕಣ್ಣುಬಿಡುವ ಮೊದಲೇ ಮಗುವಿನ ಬದುಕನ್ನು ಹೊಸಕಿ ಹಾಕಬೇಡಿ, ಅದನ್ನು ಬದುಕಲು ಬಿಡಿ ಎನ್ನುವ ಧ್ಯೇಯ ವಾಕ್ಯದಡಿ ಮಮತೆಯ ತೊಟ್ಟಿಲು ಕಾರ್ಯಕ್ರಮವನ್ನು ಸೋಮವಾರ ಚೆಲುವಾಂಬಾ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಮೂಲಕ ಬೇಡದ ಮಗುವಿಗೆ ಬದುಕು ಕಂಡುಕೊಳ್ಳುವ ಅವಕಾಶ ದೊರಕಿದಂತಾಗಿದೆ.

ಮೈಸೂರು ಮಹಾನಗಪಾಲಿಕೆ ಮೇಯರ್ ಬಿ.ಎಲ್.ಭೈರಪ್ಪ, ಜಿಲ್ಲಾಧಿಕಾರಿ ಡಿ.ರಂದೀಪ್ ಮಮತೆಯ ತೊಟ್ಟಿಲಿಗೆ ಮಗುವನ್ನು ಮಲಗಿಸುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಮೇಯರ್ ಬಿ.ಎಲ್.ಭೈರಪ್ಪ ಮಗು ಹಲವೆಡೆ ಹುಟ್ಟುತ್ತಲೇ ಹೆತ್ತಮ್ಮನ ಕೈಜಾರುವ ಪರಿಸ್ಥಿತಿ ಉಂಟಾಗುತ್ತಿದೆ. ಅಂತಹ ಅನಾಥ ಮಗುವನ್ನು ಕಾನೂನು ರೀತ್ಯಾ ಸೂಕ್ತ ಬದುಕು ಕಟ್ಟಿಕೊಡಲು ಅವಕಾಶ ದೊರಕಲಿದೆ. ಇದೀಗ ಚೆಲುವಾಂಬಾ ಆಸ್ಪತ್ರೆಯಲ್ಲಿ ಮಮತೆಯ ತೊಟ್ಟಿಲು ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆ ಮತ್ತು ದತ್ತು ಕೇಂದ್ರಗಳಲ್ಲಿ  ಮಮತೆಯ ತೊಟ್ಟಿಲು ಇರುವಂತೆ ಸರ್ಕಾರ ಆದೇಶ ಹೊರಡಿಸಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕಿ ಕೆ.ರಾಧಾ, ಮೈಸೂರು ಮೆಡಿಕಲ್ ಕಾಲೇಜ್ ಡೀನ್ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: