ಕ್ರೀಡೆಪ್ರಮುಖ ಸುದ್ದಿ

ಮೂರನೇ ಟೆಸ್ಟ್ ಡ್ರಾ ನಲ್ಲಿ ಅಂತ್ಯ: ಭಾರತಕ್ಕೆ ಸರಣಿ ಜಯ

ನವದೆಹಲಿ,ಡಿ.6-ಇಲ್ಲಿನ ಫಿರೋಜ್ ಶಾ ಕೋಟ್ಲಾ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ-ಶ್ರೀಲಂಕಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಡ್ರಾ ನಲ್ಲಿ ಅಂತ್ಯಗೊಂಡಿದೆ. ಇದರೊಂದಿಗೆ ಮೂರು ಪಂದ್ಯಗಳ ಈ ಸರಣಿಯನ್ನು ಭಾರತ 1-0 ಅಂತರದಿಂದ ಗೆದ್ದುಕೊಂಡಿದೆ.

ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ 536 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಲಂಕಾ ಮೊದಲ ಇನ್ನಿಂಗ್ಸ್ ನಲ್ಲಿ 373 ರನ್ ಗಳಿಸಿತ್ತು. ಭಾರತ ಎರಡನೇ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 246 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಲಂಕಾ 5 ವಿಕೆಟ್ ನಷ್ಟಕ್ಕೆ 299 ರನ್ ಗಳಿಸುವ ಮೂಲಕ ಮೂರನೇ ಟೆಸ್ಟ್ ಪಂದ್ಯವನ್ನು ಡ್ರಾ ನಲ್ಲಿ ಕೊನೆಗೊಳಿಸುವಲ್ಲಿ ಸಫಲವಾಯಿತು.

ಈ ಟೆಸ್ಟ್ ಪಂದ್ಯ ಗೆಲ್ಲಲು 410 ರನ್ ಗಳ ಗುರಿ ಪಡೆದ ಲಂಕೆಯ ಎರಡನೇ ಇನ್ನಿಂಗ್ ಅನ್ನು ಬಹುವಾಗಿ ಆಧರಿಸಿದವರು ಡಿಎಂ ಡಿ’ಸಿಲ್ವ (119 ರನ್, ಗಾಯಾಳುವಾಗಿ ನಿವೃತ್ತಿ), ಚಂಡಿಮಾಲ್ 36ರನ್. ಎ ಆರ್ ಎಸ್ ಸಿಲ್ವ 74, ಡಿಕ್ವೆಲಾ 44 ರನ್.  ರವೀಂದ್ರ ಜಡೇಜ 3 ವಿಕೆಟ್ ಪಡೆದರೆ ಮೊಹಮ್ಮದ್ ಶಮೀ 1, ಆರ್ ಅಶ್ವಿನ್ 1 ವಿಕೆಟ್ ಪಡೆದರು. (ವರದಿ-ಎಂ.ಎನ್)

 

Leave a Reply

comments

Related Articles

error: