ವಿದೇಶ

ನ್ಯೂಜಿ಼ಲ್ಯಾಂಡ್‍ನಲ್ಲಿ ಪ್ರಬಲ ಭೂಕಂಪ: ಎರಡು ಸಾವು

ಕ್ರೈಸ್ಟ್ ಚರ್ಚ್: ನ್ಯೂಜಿಲ್ಯಾಂಡ್‌ನ ದಕ್ಷಿಣ ದ್ವೀಪದ ಉತ್ತರ ಭಾಗದಲ್ಲಿ ಶನಿವಾರ ಪ್ರಬಲ ಭೂಕಂಪ ಸಂಭವಿಸಿ ಕಟ್ಟಡಗಳು ಧ್ವಂಸಗೊಂಡಿವೆ. ರಸ್ತೆ, ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಡಿತಗೊಂಡಿದ್ದು, ರಿಕ್ಟರ್ ಮಾಪಕದಲ್ಲಿ 7.1 ರಷ್ಟು ತೀವ್ರತೆ ದಾಖಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಜಾನೆ ವೇಳೆ ಜನರು ನಿದ್ದೆಯಲ್ಲಿದ್ದಾಗ ಈ ಭೂಕಂಪ ಸಂಭವಿಸಿದೆ. ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಎಲ್ಲಾ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ದಕ್ಷಿಣ ದ್ವೀಪ ಪ್ರದೇಶದ ರೈಲ್ವೆ ಹಳಿಗಳು ಅಸ್ತವ್ಯಸ್ತವಾಗಿದ್ದು, ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಗ್ಗು ಪ್ರದೇಶಗಳನ್ನು ತೊರೆದು ಜನರು ಎತ್ತರದ ಜಾಗಗಳಿಗೆ ತೆರಳಬೇಕು ಮತ್ತು ಸಾಗರದಂಚಿನಿಂದ ದೂರ ಸ್ಥಳಾಂತರಗೊಳ್ಳಬೇಕು ಎಂದು ಎಚ್ಚರಿಕೆ ಸಂದೇಶ ರವಾನಿಸಲಾಗುತ್ತಿದೆ. ನ್ಯೂಜಿಲೆಂಡ್‌ನ ಈಶಾನ್ಯ ಕರಾವಳಿಗೆ ಸುನಾಮಿ ಅಪ್ಪಳಿಸಿದೆ.  ಭೂಕಂಪ ಸಂಭವಿಸಿದ ಎರಡು ಗಂಟೆಯ ನಂತರ ಈ ಘಟನೆ ಸಂಭವಿಸಿದೆ. ರೇಡಿಯೊ ನ್ಯೂಜಿಲೆಂಡ್ ಮಾಹಿತಿ ಪ್ರಕಾರ, ಈ ಭೀಕರ ಭೂಕಂಪದಿಂದ ಚಾಧಮ್ ದ್ವೀಪದ ಸಾವಿರಾರು ಜನ ತಮ್ಮ ತಮ್ಮ ಮನೆಗಳನ್ನು ಬಿಟ್ಟು ಬೇರೆ ಪ್ರದೇಶಕ್ಕೆ ತೆರಳುತ್ತಿದ್ದಾರೆ.

ಮನೆಯಿಂದ ಹೊರಬಿದ್ದಿರುವ ಜನ ಆತಂಕಗೊಂಡಿದ್ದಾರೆ. 2011 ರಲ್ಲೂ ಕ್ರೈಸ್ಟ್`ಚರ್ಚ್`ನಲ್ಲಿ ಭೂಕಂಪ ಸಂಭವಿಸಿ 150ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಮತ್ತೆ ಈಗ ಭೂಕಂಪ ಸಂಭವಿಸಿರುವುದರಿಂದ ಜನಸಾಮಾನ್ಯರು ಮರಳಿ ಮನೆಗೆ ಹೋಗಲು ಆತಂಕಪಡುತ್ತಿದ್ದಾರೆ.

web-1

Leave a Reply

comments

Related Articles

error: