ಸುದ್ದಿ ಸಂಕ್ಷಿಪ್ತ
ಹಿರಣ್ಮಯಿ ಪ್ರತಿಷ್ಠಾನದಿಂದ ‘ನುಡಿ ಸಂಭ್ರಮ’
ಮೈಸೂರು,ಡಿ.6 : ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದಿಂದ ಡಿ.8 ಮತ್ತು 9ರಂದು ಹಚ್ಚೇವು ಕನ್ನಡದ ದೀಪ ಹಾಗೂ ನುಡಿ ಸಂಭ್ರಮವನ್ನು ಆಯೋಜಿಸಿದೆ.
ಡಿ.8ರಂದು ಮಧ್ಯಾಹ್ನ 2.30ಕ್ಕೆ ಪೊಲೀಸ್ ಭವನದ ಬಳಿಯ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾಹಿತಿ ಬನ್ನೂರು ಕೆ.ರಾಜು, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಮೊದಲಾದವರು ಭಾಗವಹಿಸುವರು.
ಡಿ.9ರಂದು, ಬೆಳಗ್ಗೆ 10ಕ್ಕೆ ಒಂಟಿಕೊಪ್ಪಲು ಸರ್ಕಾರಿ ಶಾಲೆಯಲ್ಲಿ ನುಡಿ ಸಂಭ್ರಮ ನಡೆಯಲಿದೆ. ಮುಖ್ಯ ಶಿಕ್ಷಕ ಕೆಂಪುರಾಜ್ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)