ಮೈಸೂರು

ಮೈತ್ರಿ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ

ಮಕ್ಕಳ ರಕ್ಷಣೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಸೋಮವಾರದಂದು ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ‘ಮೈತ್ರಿ ಸಪ್ತಾಹ’ ಹಮ್ಮಿಕೊಂಡಿತ್ತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಕೆ. ರಾಧಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಗರದ ಮಹಿಳೆ ಮತ್ತು ಮಕ್ಕಳಿಗೆ ರಕ್ಷಣೆ ನೀಡುವುದೇ ಈ ಸಪ್ತಾಹದ ಉದ್ದೇಶ. ಪೋಸ್ಕೋ ಕಾಯಿದೆಯಡಿಯಲ್ಲಿ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಮಕ್ಕಳು ತಮಗಾಗಿರುವ ಸಂಸ್ಥೆಯ ಬಗ್ಗೆ ಅರಿತುಕೊಳ್ಳಬೇಕು. ಶಾಲೆಗಳು ಮತ್ತು ಸರಕಾರಿ ಕಚೇರಿಗಳಲ್ಲಿ ಪೋಸ್ಟರ್‍ಗಳನ್ನು ಹಂಚುವುದರಿಂದ ಅರಿವು ಮೂಡಿಸಬಹುದು ಎಂದು ಹೇಳಿದರು.

24/7 ಮಕ್ಕಳ ಸಹಾಯವಾಣಿ, 1098ಗೆ ಚಾಲನೆ ನೀಡಲಾಯಿತು.

ಬಿಸ್ಕತ್ತು ವಿತರಣೆಯಲ್ಲಿ ಗೊಂದಲ: ಮಕ್ಕಳಿಗೆ ಬಿಸ್ಕತ್ತು ವಿತರಣೆ ಕಾರ್ಯಕ್ರಮದಲ್ಲಿ ಮಕ್ಕಳು ಬಿಸ್ಕತ್ತಿಗಾಗಿ ತಳ್ಳಾಟ ಪ್ರಾರಂಭಿಸಿದ್ದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಪರಿಸ್ಥಿತಿಯನ್ನು ಶಾಂತರೀತಿಗೆ ತರಲು ಭದ್ರತಾ ಸಿಬ್ಬಂದಿ ಸಾಕಷ್ಟು ಹೆಣಗಾಡಿದರು.

Leave a Reply

comments

Related Articles

error: