ದೇಶಪ್ರಮುಖ ಸುದ್ದಿ

ವಿಧವೆಯರ ರಕ್ಷಣೆಯಲ್ಲಿ ವಿಫಲವಾದ ರಾಜ್ಯಗಳಿಗೆ ದಂಡ ವಿಧಿಸಿದ ಸುಪ್ರೀಂ

ನವದೆಹಲಿ,ಡಿ.6-ವಿಧವೆಯರ ಕಲ್ಯಾಣ ಮತ್ತು ಅವರ ಪುನರ್ವಸತಿಗಾಗಿ ಸೂಕ್ತ ಕ್ರಮ ತೆಗೆದುಕೊಂಡಿಲ್ಲವೆಂದು ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳ ಮೇಲೆ ಸುಪ್ರೀಂ ಕೋರ್ಟ್ 2 ಲಕ್ಷ ರೂ. ದಂಡ ವಿಧಿಸಿದೆ.

ಕರ್ನಾಟಕ, ಉತ್ತರಾಖಂಡ್, ಮಧ್ಯಪ್ರದೇಶ, ಗುಜರಾತ್, ಮಿಜೋರಾಂ, ಆಸ್ಸಾಂ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ತಮಿಳುನಾಡು, ಅರುಣಾಚಲ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ದಂಡ ವಿಧಿಸಿದೆ.

ವಿಧವೆಯರಿಗೆ ಮಾತ್ರವಲ್ಲ ದುಃಸ್ಥಿತಿಯಲ್ಲಿರುವ, ತಿರಸ್ಕಾರಕ್ಕೊಳಗಾಗಿರುವ, ಪರಿತ್ಯಕ್ತವಾಗಿರುವ ಒಂಟಿ ಮಹಿಳೆಯರಿಗೂ ರಕ್ಷಣೆ ನೀಡುವುದು, ಅವರಿಗೆ ಹಣಕಾಸು ಸಹಾಯವನ್ನು ಒದಗಿಸುವ, ಪಿಂಚಣಿ ಮತ್ತು ಆರೋಗ್ಯ ಸೇವೆ ದೊರಕಿಸುವ ಕರ್ತವ್ಯ ಸರ್ಕಾರದ್ದಾಗಿದೆ. ಇದನ್ನು ಕರ್ನಾಟಕವೂ ಸೇರಿದಂತೆ ಒಂಬತ್ತು ರಾಜ್ಯಗಳು ಮಾಡುತ್ತಿಲ್ಲವೆಂಬುದು ಸರ್ವೋಚ್ಚ ನ್ಯಾಯಾಲಯದ ಆರೋಪವಾಗಿದೆ.

ಸರ್ಕಾರ ಮುಸ್ಲಿಂ ಮಹಿಳೆಯರ ರಕ್ಷಣೆಗೆಂದು ತ್ರಿವಳಿ ತಲಾಖ್ ವಿರುದ್ಧ ಕ್ರಮ ಜರುಗಿಸಲು ಮುಂದಾಗಿದೆ. ಆದರೆ ವಿಧವೆಯರ ಕಲ್ಯಾಣಕ್ಕಾಗಿ ಯಾವುದೇ ಕ್ರಮ ತೆಗೆದುಕೊಳ್ಳಲು ಕೇಂದ್ರ ವಿಫಲವಾಗಿದೆ ಎಂದು ಸೈಯದ್ ಎಂಬುವವರು ಟ್ವಿಟ್ಟರ್ ನಲ್ಲಿ ಟೀಕಿಸಿದ್ದಾರೆ. (ವರದಿ-ಎಂ.ಎನ್)

 

 

 

 

 

Leave a Reply

comments

Related Articles

error: